ಹಣಕ್ಕಾಗಿ ಇಬ್ಬರ ಕೊಲೆಗೆ ಸಂಚು ನಡೆಸಿದ ಆರೋಪದಲ್ಲಿ 45ರ ಹರೆಯದ ಸಿಖ್ ಮಹಿಳೆಯೊಬ್ಬಳನ್ನು ಕೆನಡಾದ ವಾಂಕೂವರ್ ಪೊಲೀಸರು ಬಂಧಿಸಿದ್ದಾರೆ.
ಅವಳಿ ಕೊಲೆ ನಡೆಸಲು ಬಾಡಿಗೆ ಬಂಟರನ್ನು ನೇಮಿಸಿದ ಆರೋಪದಲ್ಲಿ ಬಂಧಿತಳಾದವಳು ಅಮರಜಿತ್ ಕೌರ್ ಲಾಲಿ. ಆಕೆ ಕೊಲ್ಲಬೇಕೆಂದಿದ್ದುದು ಕೂಡ ಭಾರತೀಯ ಮೂಲದ ಕೆನಡಿಯನ್ನರನ್ನು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೊಲೆಯ ಹಿಂದೆ ಹಣದ ಉದ್ದೇಶವಿದೆ. ಬಂಧಿತ ಮಹಿಳೆ ಹಿಂದೆಯೂ ಕ್ರಿಮಿನಲ್ ದಾಖಲೆ ಉಳ್ಳವಳೇ ಆಗಿದ್ದಾಳೆ. 1997ರಲ್ಲಿ ಕಳ್ಳತನಕ್ಕಾಗಿ ಆಕೆಗೆ 6 ತಿಂಗಳು ಜೈಲು ಶಿಕ್ಷೆಯಾಗಿತ್ತು.