ಪಾಕಿಸ್ತಾನದ ಜೊತೆ 'ಸದ್ಯಕ್ಕೆ' ಭಾರತದ ಮಾದರಿಯಲ್ಲಿ ನಾಗರಿಕ ಪರಿಮಾಣು ಒಪ್ಪಂದ ಇಲ್ಲ ಎಂದು ಅಮೆರಿಕ ಮಗದೊಮ್ಮೆ ಸ್ಪಷ್ಟಪಡಿಸಿದೆ.
ನಾವು ಪಾಕಿಸ್ತಾನದ ವಿದ್ಯುತ್ ಅವಶ್ಯಕತೆಗಳ ಕುರಿತು ಕಾಳಜಿ ಹೊಂದಿದ್ದೇವೆ. ಆದರೆ, ಕಳೆದ ವಾರ ಸ್ಪಷ್ಟಪಡಿಸಿರುವಂತೆ ಇದರಲ್ಲಿ ನಾಗರಿಕ ಪರಮಾಣು ಬಳಕೆ ಒಪ್ಪಂದ 'ಸದ್ಯಕ್ಕೆ' ಒಳಗೊಂಡಿಲ್ಲ ಎಂದು ಅಮೆರಿಕ ವಿದೇಶಾಂಗ ವಕ್ತಾರ ಪಿ.ಜೆ.ಕ್ರೌಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ಅಮೆರಿಕ-ಪಾಕ್ ಮಧ್ಯೆ ನಡೆದ ಮಾತುಕತೆಯ ಸಂದರ್ಭ ಭಾರತ ಮಾದರಿಯ ಅಣು ಒಪ್ಪಂದವೂ ಸೇರಿದಂತೆ 56 ಬೇಡಿಕೆಗಳ ಪಟ್ಟಿಯನ್ನು ಪಾಕಿಸ್ತಾನವು ಸಲ್ಲಿಸಿತ್ತು. ಆದರೆ ಮಾತುಕತೆ ವೇಳೆ ಈ ವಿಷಯ ಪ್ರಸ್ತಾಪವಾಯಿತೇ ಎಂಬುದು ತಮಗೆ ತಿಳಿದಿಲ್ಲ ಎಂದು ವಕ್ತಾರರು ತಿಳಿಸಿದರು.