ಮಹತ್ವದ ಒಪ್ಪಂದಕ್ಕೆ ಸಹಿ
ಹಲವಾರು ವರ್ಷಗಳ ವೈರತ್ವವನ್ನು ಮರೆತು, ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಒಪ್ಪಂದಕ್ಕೆ ಅಮೆರಿಕ ರಾಷ್ಟ್ರಪತಿ ಬರಾಕ್ ಒಬಾಮಾ ಹಾಗೂ ರಷ್ಯಾ ರಾಷ್ಟ್ರಪತಿ ಡ್ಮಿಟ್ರಿ ಮೆಡ್ವಡೀವ್ ಅವರು ಗುರುವಾರ ಸಹಿ ಹಾಕಿದರು. ಶೀತಲ ಸಮರದ ಎರಡು ರಾಷ್ಟ್ರಗಳ ನಡುವಿನ ಈ ಒಪ್ಪಂದದ ಪ್ರಕಾರ, ಎರಡೂ ರಾಷ್ಟ್ರಗಳ ಪರಮಾಣು ಸಿಡಿತಲೆಗಳುಳ್ಳ ಕ್ಷಿಪಣಿಗಳ ಸಂಖ್ಯೆಯನ್ನು ತಲಾ 1550ಕ್ಕೆ ಇಳಿಸಬೇಕಾಗುತ್ತದೆ.