ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಸೇರುವೆ: ಅಮೆರಿಕಕ್ಕೆ ಕರ್ಜಾಯಿ ಎಚ್ಚರಿಕೆ (US | Afghanistan | Hamid Karzai | Taliban)
Bookmark and Share Feedback Print
 
ಅಮೆರಿಕವು ಅಫ್ಘಾನಿಸ್ತಾನದಲ್ಲಿ 'ಮೂಗು ತೂರಿಸುತ್ತಿದೆ' ಎಂದು ಆರೋಪಿಸಿರುವ ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜಾಯಿ, ಇದೇ ರೀತಿ ಮುಂದುವರಿದರೆ ತಾನೂ ತಾಲಿಬಾನ್ ಸೇರಬೇಕಾದೀತು ಎಂದು ಹೇಳುವ ಮೂಲಕ ಇದೀಗ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಯುದ್ಧಪೀಡಿತ ರಾಷ್ಟ್ರದಿಂದ ಅಮೆರಿಕ ಸೇನೆಯನ್ನು ಹಿಂತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾಲಮಿತಿ ನಿಗದಿಪಡಿಸುವಂತೆ ಅಮೆರಿಕದ ಮೂವರು ಸಂಸತ್ ಸದಸ್ಯರು ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಆಗ್ರಹಿಸಿದ್ದಾರೆ.

ಕರ್ಜಾಯಿ ಅಮೆರಿಕದ ಮೇಲೆ ಕಿಡಿ ಕಾರುತ್ತಿರುವುದು ಮೂರು ದಿನಗಳಲ್ಲಿ ಎರಡನೇ ಬಾರಿ. ಈ ರೀತಿ ಮೂಗು ತೂರಿಸುವಿಕೆ ನಿಲ್ಲದೇ ಹೋದರೆ, ತಾಲಿಬಾನ್ ಉಗ್ರವಾದವೇ ಕಾನೂನುಬದ್ಧ ಪ್ರತಿರೋಧ ಆಗಬಹುದು ಎಂದೂ ಹೇಳುವ ಮೂಲಕ ಕರ್ಜಾಯಿ, ತಾಲಿಬಾನ್ ಆಂದೋಲನವನ್ನು ತಾವೂ ಮುಂದುವರಿಸುವ ಕುರಿತು ಸುಳಿವು ನೀಡಿದ್ದರು.

60ರಿಂದ 70 ಅಫ್ಘನ್ ಸಂಸದರ ಮಧ್ಯೆ ನಡೆದ ಖಾಸಗಿ ಸಭೆಯಲ್ಲಿ, ತಮ್ಮ ದೇಶದ ಚುನಾವಣಾ ಸಂಸ್ಥೆಯನ್ನು ವಿಶ್ವಸಂಸ್ಥೆಯ ಹಿಡಿತದಿಂದ ಆಫ್ಘಾನಿಸ್ತಾನ ನಿಯಂತ್ರಣಕ್ಕೆ ತರುವ ತಮ್ಮ ವಿವಾದಾತ್ಮಕ ಪ್ರಯತ್ನಕ್ಕೆ ಸಂಸತ್ತು ಬೆಂಬಲಿಸದೇಹೋದರೆ, ತಾನು ಕೂಡ ತಾಲಿಬಾನ್ ಸೇರಬೇಕಾದೀತು ಎಂದೂ ಕರ್ಜಾಯಿ ಎಚ್ಚರಿಕೆ ನೀಡಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಇದೀಗ ಕರ್ಜಾಯಿ, ಅಮೆರಿಕ ವಿದೇಶಾಂಗ ಸಚಿವ ಹಿಲರಿ ಕ್ಲಿಂಟನ್ ಜತೆಗಿನ ಮಾತುಕತೆ ವೇಳೆ ಅಮೆರಿಕದೊಂದಿಗೆ ಕೆಲಸ ಮಾಡಲು ತಾನು ಬದ್ಧ ಎಂಬ ಭರವಸೆ ನೀಡಿದ ಇಪ್ಪತ್ತನಾಲ್ಕು ಗಂಟೆಗಳ ಒಳಗೇ, ಅಮೆರಿಕ ಮಧ್ಯಪ್ರವೇಶ ಬಗ್ಗೆ ಕಿಡಿ ಕಾರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ