ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರೋಗಿಯ ಮೇಲೆ ಅತ್ಯಾಚಾರ ನಡೆಸಿದ ನರ್ಸ್! (Kennady Swamy | Male Nurse | Rape | Patient | Australia)
Bookmark and Share Feedback Print
 
ಮೆಲ್ಬರ್ನ್ ಯುವ ಮನೋರೋಗಿಗಳ ಚಿಕಿತ್ಸಾ ಕೇಂದ್ರದಲ್ಲಿ ರೋಗಿಯೊಬ್ಬಳೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಭಾರತೀಯ ಮೂಲದ ಪುರುಷ ನರ್ಸ್ ಒಬ್ಬನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

2006ರಲ್ಲಿ ಭಾರತದಿಂದ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ ಕೆನಡಿ ಸ್ವಾಮಿ ಎಂಬಾತ ನರ್ಸ್ ಕೆಲಸಕ್ಕೆ ಸೇರಿದ್ದ. ಅಲ್ಲಿ ಬೈಪೋಲಾರ್ ಡಿಸಾರ್ಡರ್ ಎಂಬ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದ 18ರ ಯುವತಿಯೊಂದಿಗೆ ಪರಿಚಯವಾಗಿತ್ತು.

ಬೈಪೋಲಾರ್ ಡಿಸಾರ್ಡರ್ ಎಂಬುದು ಮಾನಸಿಕ ಖಿನ್ನತೆಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದೊಂದು ಮೆದುಳಿನ ಸಮಸ್ಯೆ. ಇದು ದಿಢೀರ್ ಆಗಿ ಮೂಡ್ ಬದಲಾವಣೆ, ಸಾಮರ್ಥ್ಯ, ಚಟುವಟಿಕೆಗಳು ಮತ್ತು ದೈನಂದಿನ ಕೆಲಸ ಕಾರ್ಯಗಳ ನಿಭಾವಣೆಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಾಣಿಸಿಕೊಳ್ಳುವ ಮನೋರೋಗ.

ಆಗ 28 ವರ್ಷದವನಾಗಿದ್ದ ಕೆನಡಿ ಸ್ವಾಮಿ, ಈ ರೋಗಿಯ ಬಳಿ, ನಾನು ನಿನಗಿಷ್ಟವೇ ಎಂದೆಲ್ಲಾ ಕೇಳಿ, ಪುಸಲಾಯಿಸಿ ಬಾತ್‌ರೂಮ್‌ಗೆ ಕರೆದೊಯ್ದು ಲೈಂಗಿಕ ಕ್ರಿಯೆಯಲ್ಲಿ ನಿರತನಾಗಿದ್ದ. ಇದು ನಡೆದದ್ದು ಮಾರ್ಚ್ 7ರಂದು. ಎರಡು ದಿನದ ನಂತರ ಅವರಿಬ್ಬರು ಮತ್ತೊಮ್ಮೆ ಬಾತ್‌ರೂಮಿನಲ್ಲಿ ಸೆಕ್ಸ್ ಚಟುವಟಿಕೆಯಲ್ಲಿ ಪಾಲ್ಗೊಂಡರು.

ಥೆರಪಿ ಸಂದರ್ಭ ಈ ತರುಣಿ ಇದನ್ನು ಬಾಯಿಬಿಟ್ಟಿದ್ದಾಳೆ. ಆಕೆ ಮೊದಲು ಇದನ್ನು ಸರಿ ಎಂದು ಯೋಚಿಸಿದ್ದಳು (ಭಾವನೆಗಳ ದಿಢೀರ್ ಬದಲಾವಣೆ), ಬಳಿಕ ಇದು ತಪ್ಪು ಎಂದು ಅರಿತುಕೊಂಡಳು ಎಂದು ನ್ಯಾಯಾಧೀಶರು ವಿಚಾರಣೆ ಸಂದರ್ಭ ವಿವರಿಸಿದ್ದಾರೆ.

ಕಾಯಿಲೆಯಿಂದಾಗಿ ಈ ತರುಣಿಯ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬಾಧಿತವಾಗಿತ್ತು. ನರ್ಸ್ ಕೆಲಸ ನಿರ್ವಹಿಸುತ್ತಿದ್ದ ಈ ವ್ಯಕ್ತಿ ಇದರ ದುರುಪಯೋಗಪಡಿಸಿಕೊಂಡ. ವಿಶ್ವಾಸದ್ರೋಹವೆಸಗಿದ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ವಿಶ್ಲೇಷಿಸಿದ್ದಾರೆ.

ಇದೀಗ ಉದ್ಯೋಗ ಕಳೆದುಕೊಂಡಿರುವ ಸ್ವಾಮಿಯ ವಿದ್ಯಾರ್ಥಿ ವೀಸಾ ಅವಧಿ ಮುಗಿದಿದೆ. ಆತನ ಪತ್ನಿ ಭಾರತಕ್ಕೆ ಹೋದವಳು ಇನ್ನೂ ಬರಬೇಕಷ್ಟೆ. ಇದೀಗ ತಪ್ಪೊಪ್ಪಿಕೊಂಡಿರುವ ಸ್ವಾಮಿ, ಪೆರೋಲ್‌ಗೆ ಅರ್ಹತೆ ಗಳಿಸಬೇಕಿದ್ದರೆ ಕನಿಷ್ಠ 15 ತಿಂಗಳು ಜೈಲಿನಲ್ಲಿರಬೇಕಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ