ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೇಸ್‌ಬುಕ್ 'ಹ್ಯಾಕ್' ಮಾಡಿದ್ದಕ್ಕೆ ತಾಯಿ ಮೇಲೇ ಕೇಸು! (Facebook | Hack | Arkansas | Child | Parent | Online behaviour)
Bookmark and Share Feedback Print
 
ಅರ್ಕನ್ಸಾಸ್‌ನ 16 ಹರೆಯದ ಹುಡುಗನೊಬ್ಬ ತಾಯಿಯ ಮೇಲೆಯೇ ಕೇಸ್ ಹಾಕುತ್ತಿದ್ದಾನೆ. ತಾಯಿಯೇನು ಮಾಡಿದ್ದು ಗೊತ್ತೇ? ಆತನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದು ಮತ್ತು ಶ್ಲೀಲವಲ್ಲದ ಕಾಮೆಂಟ್‌ಗಳನ್ನು ಹಾಕಿದ್ದು!

ಆದರೆ, ತಾಯಿ ಡಿನೈಸ್ ನ್ಯೂ ಈ ಆರೋಪಗಳನ್ನು ತಳ್ಳಿ ಹಾಕಿದ್ದಾಳೆ. ತನ್ನ ಮಗ ನನ್ನ ಕಂಪ್ಯೂಟರಿನಲ್ಲಿ ಫೇಸ್‌ಬುಕ್ ಜಾಲಾಡಿ, ಆ ಪುಟವನ್ನು ತೆರೆದೇ ಇರಿಸಿದ್ದ. ಮತ್ತು ಆತ ತನ್ನ ಫೇಸ್‌ಬುಕ್ ಪುಟದಲ್ಲಿ ವ್ಯರ್ಥ ಆರೋಪಗಳನ್ನೆಲ್ಲಾ ಹಾಕುತ್ತಿದ್ದ. ಹೀಗಾಗಿ ಈ ಖಾತೆಯನ್ನು ನೋಡಲು ತನಗೆ ಅಧಿಕಾರವಿದೆ ಎಂದು ಹೇಳಿದ್ದಾಳೆ.

ಹುಡುಗ ಹೇಳುವಂತೆ, (ಆತ ಅಪ್ರಾಪ್ತ ವಯಸ್ಕನಾದುದರಿಂದ ಹೆಸರು ಬಹಿರಂಗವಾಗಿಲ್ಲ), ತಾಯಿ ತನ್ನ ಫೇಸ್‌ಬುಕ್ ಮತ್ತು ಇಮೇಲ್ ಖಾತೆಗಳನ್ನು ಹ್ಯಾಕ್ ಮಾಡಿದ್ದಾಳೆ, ನಂತರ ಎರಡೂ ಪಾಸ್‌ವರ್ಡ್‌ಗಳನ್ನು ಬದಲಾಯಿಸಿದ್ದಾಳೆ. ಹೀಗಾಗಿ ತನಗೆ ಈಗ ಲಾಗ್ಇನ್ ಆಗಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೆ, ಅವಳು ತನ್ನ ವೈಯಕ್ತಿಕ ಜೀವನದ ಬಗ್ಗೆ ಅಪಪ್ರಚಾರವುಳ್ಳ ಅಸಭ್ಯ ಮಾಹಿತಿಗಳನ್ನೂ ಅದರಲ್ಲಿ ಪೋಸ್ಟ್ ಮಾಡಿದ್ದಾಳೆ!

ವರದಿಯ ಪ್ರಕಾರ, ಹುಡುಗಿಯೊಬ್ಬಳೊಂದಿಗೆ ಕೋಪಿಸಿಕೊಂಡು ಗಂಟೆಗೆ 152 ಕಿಮೀ ವೇಗದಲ್ಲಿ ರಾತ್ರಿ ಕಾರು ಓಡಿಸಿಕೊಂಡು ಮನೆಗೆ ಬಂದೆ ಎಂದು ಆತ ಫೇಸ್‌ಬುಕ್‌ನಲ್ಲಿ ಬರೆದಿದ್ದರಿಂದ ತಾಯಿಗೆ ಕೋಪ ಬಂದಿತ್ತು. ಮಗನ ಆನ್‌ಲೈನ್ ಚಟುವಟಿಕೆ ಮೇಲೆ ನಿಗಾ ಇಡಲು ತನಗೆ ಪೂರ್ಣ ಹಕ್ಕಿದೆ ಎಂಬ ಕಾರಣಕ್ಕೆ ತಾಯಿ ಇದೀಗ ಈ ಕೇಸನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದ್ದಾಳೆ.

ಖಂಡಿತವಾಗಿ ನಾನಿದನ್ನು ಎದುರಿಸುತ್ತೇನೆ. ಇದು ಎಲ್ಲ ಪೋಷಕರಿಗೆ ಮಾದರಿ ದೃಷ್ಟಾಂತವಾಗಲಿದೆ ಎಂದು ತಾಯಿಯು ಕೆಎಟಿವಿಗೆ ತಿಳಿಸಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ