ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾದಲ್ಲಿ ತೆರೆದುಕೊಂಡ ಭಾರತ ಉತ್ಸವ (India Utsav in China | SM Krishna | India - China Relationship)
Bookmark and Share Feedback Print
 
ಭಾರತೀಯ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಚೀನಾದಲ್ಲಿ ಗುರುವಾರ ಭಾರತ ಉತ್ಸವವನ್ನು ಉದ್ಘಾಟಿಸುವುದರೊಂದಿಗೆ, ಡ್ರ್ಯಾಗನ್‌ಗಳ ನಾಡಿನಲ್ಲಿ ಭಾರತದ ರಂಗು ರಂಗಿನ ಸಾಂಸ್ಕೃತಿಕ ವೈಭವದ ಕಲಾಪ್ರದರ್ಶನಕ್ಕೆ ಅವಕಾಶ ದೊರೆಯಿತು.

ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಾಂಧವ್ಯದ 60ನೇ ವರ್ಷಾಚರಣೆಯ ಮಹತ್ವದ ಈ ವರ್ಷ, ಚೀನಾದಲ್ಲಿ ಭಾರತ ಉತ್ಸವವನ್ನು ಉದ್ಘಾಟಿಸಿರುವುದು ಹೆಮ್ಮೆ ತಂದಿದೆ ಎಂದು ಐತಿಹಾಸಿಕ ಫೋರ್‌ಬಿಡನ್ ಸಿಟಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಕೃಷ್ಣ ನುಡಿದರು.

ಕಳಿಂಗ ಯುದ್ಧದ ಬಳಿಕ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಶೋಕ ಚಕ್ರವರ್ತಿಯ ಜೀವನಾಧಾರಿತ ನಾಟಕ 'ಉತ್ತರ ಪ್ರಿಯದರ್ಶಿ'ಯೊಂದಿಗೆ ಉತ್ಸವ ಆರಂಭವಾಯಿತು. ಇಲ್ಲಿ ಸಾಂಪ್ರದಾಯಿಕ, ಸಮಕಾಲಿನ ನೃತ್ಯ, ನಾಟಕಗಳು, ರಂಗ ಕಲೆಗಳು, ಪ್ರದರ್ಶನ ಕಲೆಗಳು ಅನಾವರಣಗೊಳ್ಳಲಿವೆ.

ಭಾರತದ ಪಂಡಿತ್ ಶಿವಕುಮಾರ್ ಶರ್ಮಾ (ಸಂತೂರ್), ಹರಿಪ್ರಸಾದ್ ಚೌರಾಸಿಯಾ (ಕೊಳಲು), ಲೀಲಾ ಸ್ಯಾಮ್ಸನ್ (ಭರತನಾಟ್ಯ), ಕುಮುದಿನಿ ಲಖಿಯಾ (ಕಥಕ್) ಮುಂತಾದ ಕಲಾವಿದರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಇದರ ಸಮಾರೋಪ ಸಮಾರಂಭ ಜರುಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ