ಕಮ್ಯೂನಿಸ್ಟ್ ಬಂಡುಕೋರರರೆಂಬ ಆರೋಪದಲ್ಲಿ ಸೇನೆಯಿಂದ ಬಂಧಿತರಾಗಿರುವ 43 ಮಂದಿ ಆರೋಗ್ಯ ಸೇವಾ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಎದ್ದಿರುವ ಕೂಗಿಗೆ ಫಿಲಿಪ್ಪೀನ್ಸ್ ರೋಮನ್ ಕೆಥೋಲಿಕ್ ಚರ್ಚ್ ದನಿಗೂಡಿಸಿದೆ. ಮಾನವ ಹಕ್ಕುಗಳಿಗೆ ಮತ್ತು ಕಾನೂನಿಗೆ ಗೌರವ ಕೊಡುತ್ತಿಲ್ಲ ಎಂದು ಅದು ಸೇನೆಯ ವಿರುದ್ಧ ಕೆಂಡ ಕಾರಿದೆ.