ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಸಬ್ ಹೇಳಿಕೆ ತನ್ನ ವಿರುದ್ಧ ಬಳಸದಂತೆ ಲಖ್ವಿ ಮನವಿ! (Mumbai Attack | 26 11 Terror Attack | Lakhvi | LET | Lashkar | Pakistan | Terrorist)
Bookmark and Share Feedback Print
 
ಮುಂಬೈ ದಾಳಿಗೆ ಸಂಬಂಧಿಸಿ ಬಂಧಿತ ಪಾಕಿಸ್ತಾನಿ ಉಗ್ರಗಾಮಿ ಅಜ್ಮಲ್ ಕಸಬ್ ನೀಡಿದ ಹೇಳಿಕೆಯನ್ನು ತನ್ನ ವಿರುದ್ಧ ಬಳಸುವುದನ್ನು ತಡೆಯಬೇಕು ಎಂದು ಕೋರಿ, ಮುಂಬೈ ದಾಳಿಯ ರೂವಾರಿ, ಲಷ್ಕರ್ ಇ ತೋಯ್ಬಾ ಕಮಾಂಡರ್ ಝಕಿ ಉರ್ ರಹಮಾನ್ ಲಖ್ವಿ ಪಾಕಿಸ್ತಾನದ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾನೆ.

ಲಖ್ವಿ ವಕೀಲರು ಸುಪ್ರೀಂ ಕೋರ್ಟಿನ ಲಾಹೋರ್ ಪೀಠದಲ್ಲಿ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ಅಧಿಕಾರಿಗಳಿಗೆ ಕಸಬ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯನ್ನು ತನ್ನ ವಿರುದ್ಧ ರಾವಲ್ಪಿಂಡಿಯಲ್ಲಿ ಭಯೋತ್ಪಾದನಾ-ವಿರೋಧಿ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆ ವೇಳೆ ಬಳಸದಂತೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಾಸಿಕ್ಯೂಶನ್ ತಮ್ಮ ಫಿರ್ಯಾದಿದಾರರ ಮೇಲೆ ಯಾವುದೇ ಆರೋಪ ಹೊರಿಸಿಲ್ಲ ಎಂದಿರುವ ವಕೀಲ ಖ್ವಾಜಾ ಸುಲ್ತಾನ್, ಮುಂಬೈ ದಾಳಿಯಲ್ಲಿ ಭಾಗಿಯಾದ ಉಗ್ರಗಾಮಿಗಳಿಗೆ ತರಬೇತಿ ನೀಡಿರುವ ಆರೋಪವೂ ಲಖ್ವಿ ಮೇಲೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಾಸಿಕ್ಯೂಶನ್ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ವಿವರಿಸಿರುವಂತೆ ಅರ್ಜಿದಾರ (ಲಖ್ವಿ) ಕೇವಲ ಲಷ್ಕರ್ ಕಮಾಂಡರ್. ಆದರೆ ಮುಂಬೈ ದಾಳಿಗೆ ಲಖ್ವಿಯ ಸಂಬಂಧವನ್ನು ದೃಢೀಕರಿಸಿಲ್ಲ. ಪಾಕಿಸ್ತಾನಿ ಕಾನೂನಿನ ಪ್ರಕಾರ, ಸಹ-ಆರೋಪಿಯೊಂದಿಗೆ ಜೊತೆಯಾಗಿ ವಿಚಾರಣೆ ನಡೆಸಿದರೆ ಮಾತ್ರವೇ ತಪ್ಪೊಪ್ಪಿಗೆ ಹೇಳಿಕೆ ಸಿಂಧುವಾಗುತ್ತದೆ ಎಂದಿದ್ದಾರೆ ಅವರು.

ಲಖ್ವಿ ವಿರುದ್ಧ ದಾಖಲಿಸಿದ ಯಾವುದೇ ಚಾರ್ಜ್‌ಶೀಟಿನಲ್ಲಿ ಕೂಡ ಕಸಬ್ ಹೆಸರಿಲ್ಲ. ಹೀಗಾಗಿ ಕಸಬ್ ಹೇಳಿಕೆಯನ್ನು ಲಖ್ವಿ ವಿರುದ್ಧ ಬಳಸಬಾರದು ಎಂದು ವಾದಿಸಿದ್ದಾರೆ ಸುಲ್ತಾನ್.

ಲಖ್ವಿ ಜೊತೆಗೆ ಜರಾರ್ ಶಾ, ಅಬು ಅಲ್ ಖಾಮಾ, ಹಮದ್ ಅಮಿನ್ ಸಾದಿಕ್, ಶಾಹಿದ್ ಜಮೀಲ್ ರಿಯಾಜ್, ಜಮೀಲ್ ಅಹ್ಮದ್ ಮತ್ತು ಯೂನಸ್ ಅಂಜುಮ್ ಅವರನ್ನು ಮುಂಬೈ ದಾಳಿಯ ಯೋಜನೆ ರೂಪಿಸಿದ ಆರೋಪದಲ್ಲಿ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ