ಪಶ್ಚಿಮ ರಷ್ಯಾಕ್ಕೆ ತೆರಳುತ್ತಿದ್ದ ವಿಮಾನ ಅಪಘಾತಕ್ಕಿಡಾದ ಹಿನ್ನೆಲೆಯಲ್ಲಿ, ಪೊಲೆಂಡ್ ರಾಷ್ಟ್ರಪತಿ ಸೇರಿದಂತೆ ಕನಿಷ್ಠ 130 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ಪಶ್ಚಿಮ ಭಾಗದಲ್ಲಿರುವ ಸ್ಮೊಲೆನ್ಸೆಕ್ ಪ್ರದೇಶದಲ್ಲಿ, ಬೆಳಿಗ್ಗೆ 11ಗಂಟೆಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಯಾರೊಬ್ಬರು ಬದುಕುಳಿದಿಲ್ಲ ಎಂದು ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ.
ಪೊಲೆಂಡ್ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ವಿಮಾನ ರನ್‌ವೇಯಲ್ಲಿ ಇಳಿಯುವಾಗ ಅಪಘಾತಕ್ಕಿಡಾಗಿಲ್ಲ. ಆದರೆ ಮರಗಳ ತುದಿಗೆ ಬಡಿದಿದ್ದರಿಂದ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾರೊಬ್ಬರು ಬದುಕುಳಿದಿಲ್ಲ ಎಂದು ಗವರ್ನರ್ ಸೆರ್ಗೈ ಅನುಫ್ರೈವ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಪೊಲೆಂಡ್ ಅಧ್ಯಕ್ಷ ಕಾಜ್ನೆಸ್ಕಿ ಮತ್ತು ಅವರ ಪತ್ನಿ ವಿಮಾನದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೆಂಡ್‌ನ ವಿದೇಶಾಂಗ ಸಚಿವರು ಖಚಿತಪಡಿಸಿದ್ದಾರೆ.
ಅಪಘಾತದಲ್ಲಿ ಪೊಲೆಂಡ್‌ನ ಸೇನಾ ಮುಖ್ಯಸ್ಥ ಹಾಗೂ ಉಪವಿದೇಶಾಂಗ ಸಚಿವ ಅಂಡ್ರೆಜ್ ಕ್ರೆಮರ್ ಸೇರಿದಂತೆ ಒಟ್ಟು 132 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತನಿಖಾ ತಂಡದ ಮುಖ್ಯಸ್ಥ ಸೆರ್ಗೌ ಮಾರ್ಕಿನ್ ತಿಳಿಸಿದ್ದಾರೆ.