ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲೈಂಗಿಕ ಶೋಷಿತ ಮಕ್ಕಳಿಗೆ ಭೇಟಿಗೆ ಪೋಪ್ ನಿರ್ಧಾರ:ವ್ಯಾಟಿಕನ್ (Vatican|child sex abuse|Roman Catholic Church|pope willing to meet victims)
Bookmark and Share Feedback Print
 
ಸಿಟಿ: ಪಾದ್ರಿಗಳಿಂದ ಲೈಂಗಿಕ ಶೋಷಣೆಗೊಳಗಾದ ಮಕ್ಕಳನ್ನು ಭೇಟಿ ಮಾಡಲು ಪೋಪ್‌ ಬೆನ್‌ಡಿಕ್ಟ್ ನಿರ್ಧರಿಸಿದ್ದಾರೆ ಎಂದು ವ್ಯಾಟಿಕನ್ ವಕ್ತಾರರಾದ ಫೆಡ್ರಿಕೊ ಲೊಂಬಾರ್ಡಿ ಹೇಳಿದ್ದಾರೆ.

ಪಾದ್ರಿಗಳಿಂದ ಲೈಂಗಿಕ ಶೋಷಣೆಗೊಳಗಾದ ಮಕ್ಕಳನ್ನು ಭೇಟಿ ಮಾಡಿ ಪೊಲೀಸ್ ಹಾಗೂ ನ್ಯಾಯಾಲಯಕ್ಕೆ ರೋಮನ್ ಕ್ಯಾಥೋಲಿಕ್ ಚರ್ಚ್ ಸಹಕಾರ ನೀಡಿದಲ್ಲಿ ಮಾತ್ರ ಮತ್ತೆ ವಿಶ್ವಾಸವನ್ನು ಗಳಿಸಲು ಸಾಧ್ಯವಾಗಬಹುದು ಎಂದು ಲೊಂಬಾರ್ಡಿ ತಿಳಿಸಿದ್ದಾರೆ.

ವ್ಯಾಟಿಕನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲೊಂಬಾರ್ಡಿ,ಪಾದ್ರಿಗಳ ಕಾಮದಾಹಕ್ಕೆ ಬಲಿಯಾದ ಹಲವಾರು ದೇಶದ ಮಕ್ಕಳಿಗೆ ಕಾನೂನಿನ ನೆರವು ಒದಗಿಸಲು ನ್ಯಾಯಾಲಯ ಹಾಗೂ ಅಡಳಿತಕ್ಕೆ ಸಹಕಾರ ನೀಡಬೇಕಾಗಿದೆ ಎಂದರು.

ಚರ್ಚ್‌ಗಳಲ್ಲಿ ವಿಶ್ವಾಸ ವೃದ್ಧಿಯಾಗಲು ಹಾಗೂ ಬಲಿಪಶುವಾದ ಮಕ್ಕಳಿಗೆ ನ್ಯಾಯ ಒದಗಿಸಲು ಇದೊಂದೆ ದಾರಿಯಾಗಿದೆ ಎಂದು ಲೊಂಬಾರ್ಡಿ ತಿಳಿಸಿದ್ದಾರೆ.

ಹಲವಾರು ದೇಶಗಳಲ್ಲಿ ಪಾದ್ರಿಗಳು ಎಸಗುತ್ತಿರುವ ಲೈಂಗಿಕ ಶೋಷಣೆಗಳು ಹಾಗೂ ಅಪರಾಧವೆಸಗಿದ ಪಾದ್ರಿಗಳನ್ನು ಬೆಂಬಲಿಸುತ್ತಿರುವ ಚರ್ಚಗಳಿಂದಾಗಿ ವ್ಯಾಟಿಕನ್ ಚರ್ಚ್ ಆತಂಕವನ್ನು ಎದುರಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ