ಭಾರತದ ಪಂಜಾಬ್ ಮೂಲದ ವ್ಯಕ್ತಿಯೊಬ್ಬನ ಮೃತದೇಹ ಸಿಡ್ನಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ಕಾರಣವಾದ ನಿಖರ ಮಾಹಿತಿಯ ಬಗ್ಗೆ ಪೊಲೀಸರು ತಿಕೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತ ಧರ್ಮೇಂದ್ರ್ ಸಿಂಗ್ ದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಕಳುಹಿಸಲಾಗಿದ್ದು, ಸುಮಾರು 30-35 ವರ್ಷ ವಯಸ್ಸಿನವರಾಗಿರಬೇಕು ಎಂದು ಹೇಳಲಾಗಿದೆ.
ಪೋಸ್ಟ್‌ಮಾರ್ಟಂ ವಿವರಗಳು ಲಭ್ಯವಾದ ನಂತರ ಸಾವಿಗೆ ಕಾರಣವಾದ ಮಾಹಿತಿ ಬಹಿರಂಗವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷದಿಂದ ಭಾರತೀಯರ ಮೇಲೆ 100ಕ್ಕೂ ಹೆಚ್ಚು ದಾಳಿ ಪ್ರಕರಣಗಳು ವರದಿಯಾಗಿವೆ.ವಿಕ್ಟೋರಿಯಾದಲ್ಲಿ ಅತಿ ಹೆಚ್ಚು ದಾಳಿ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಜನೆವರಿ 3 ರಂದು 21 ವರ್ಷ ವಯಸ್ಸಿನ ಭಾರತೀಯ ನಿತಿನ್ ಗರ್ಗ್ ಎನ್ನುವ ಯುವಕನನ್ನು ಇರಿದು ಹತ್ಯೆ ಮಾಡಲಾಗಿತ್ತು. ನಂತರ ಹಲವಾರು ಪ್ರಕರಣಗಳು ವರದಿಯಾಗಿದ್ದವು.