ಭಾರತ-ಅಮೆರಿಕ ಮೈತ್ರಿ ವೃದ್ಧಿಗೆ ಒಬಾಮಾ, ಸಿಂಗ್ ಪ್ರತಿಜ್ಞೆ
ವಾಷಿಂಗ್ಟನ್, ಸೋಮವಾರ, 12 ಏಪ್ರಿಲ್ 2010( 09:37 IST )
ಅಣು ಭಯೋತ್ಪಾದನೆ ಅಫ್ಘಾನಿಸ್ತಾನ ಸೇರಿದಂತೆ ಪ್ರಾದೇಶಿಕ ಹಾಗೂ ದ್ವಿಪಕ್ಷೀಯ ಸಮಸ್ಯೆಗಳನ್ನು ಇತ್ಯರ್ಥ್ಯಗೊಳಿಸಿ, ಉಭಯ ರಾಷ್ಟ್ರಗಳ ಮಧ್ಯೆ ಸೌಹಾರ್ದತೆಯನ್ನು ಮೂಡಿಸುವುದಾಗಿ ಪ್ರದಾನಿ ಮನಮೋಹನ್ ಸಿಂಗ್ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಾಗಿ ಬಂದ ಮೈತ್ರಿಗೆ, ದ್ವಿಪಕ್ಷೀಯ ಮಾತುಕತೆಗಳ ಮೂಲಕ ಮತ್ತಷ್ಟು ಚೇತರಿಕೆ ನೀಡಲಾಗುವುದು ಎಂದು ಒಬಾಮಾ ಮತ್ತು ಪ್ರಧಾನಿ ಸಿಂಗ್ ಅವರ ಭೇಟಿಯ ನಂತರ ಶ್ವೇತಭವನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
47ನೇ ರಾಷ್ಟ್ರೀಯ ಅಣುಸಮ್ಮೇಳನಕ್ಕೆ ಆಗಮಿಸಿದ ಪ್ರಧಾನಿ ಸಿಂಗ್ ಅವರೊಂದಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಶ್ವೇತಭವನದಿಂದ ಬ್ಲೇರ್ ಹೌಸ್‌ಗೆ ತೆರಳಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.