ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಆಗಾಗ್ಗೆ ಆಕ್ರಮಣಗಳು ನಡೆಯುತ್ತಿರುವಂತೆಯೇ ಮತ್ತೊಂದು ಆತಂಕಕಾಗಿ ಸುದ್ದಿ ಬಂದಿದ್ು, 35ರ ಹರೆಯದ ಸಭಾರತೀಯನೊಬ್ಬನ ಶವ ನಿಗೂಢವಾಗಿ ಪತ್ತೆಯಾಗಿದೆ.
ಪಂಜಾಬಿನ ಧರ್ಮೇಂದ್ರ ಸಿಂಗ್ ಎಂಬ ಯುವಕನ ಶವವು ಭಾನುವಾರ ಸಿಡ್ನಿಯ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ.
ಒಂದೂವರೆ ವರ್ಷದ ಹಿಂದೆ ಧರ್ಮೇಂದ್ರ ತನ್ನ ಪತ್ನಿಯೊಂದಿಗೆ ಸಿಡ್ನಿಯಲ್ಲಿ ನೆಲೆಗೊಂಡಿದ್ದ. ಇದೀಗ ಪಂಜಾಬಿನಲ್ಲಿರುವ ಆತನ ಕುಟುಂಬ ದುಃಖದ ಮಡುವಿನಲ್ಲಿ ಬಿದ್ದಿದೆ. ಆತನ ಪತ್ನಿಯಂತೂ ಆಘಾತಗೊಂಡು ಮಾತನಾಡುವ ಸ್ಥಿತಿಯಲ್ಲಿಲ್ಲ. ಆಸ್ಟ್ರೇಲಿಯಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕಳೆದೊಂದು ವರ್ಷದಿಂದ ಭಾರತೀಯರ ಮೇಲೆ ಜನಾಂಗೀಯ ದ್ವೇಷದ ದಾಳಿಗಳು ಹೆಚ್ಚುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.