ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿನೂತನ ಉದ್ಯೋಗಾವಕಾಶ: ಹನಿಮೂನ್ ಟೆಸ್ಟರ್! (Honemoon Tester, New Job, Romantic Place, Place for Honeymoon)
Bookmark and Share Feedback Print
 
ಕೆಲಸ ಖಾಲಿ ಇರುವ ದಂಪತಿಗಳು ಅರ್ಜಿ ಸಲ್ಲಿಸಿ ಹೊಸತನದ ಉದ್ಯೋಗವೊಂದನ್ನು ಪ್ರಯತ್ನಿಸಿ ನೋಡಲು ಸದವಕಾಶ ಇಲ್ಲಿದೆ. ವಿಶ್ವಾದ್ಯಂತ ಅತ್ಯಂತ ರೋಮ್ಯಾಂಟಿಕ್ ಆಗಿರುವ ವೈವಾಹಿಕ ಮತ್ತು ಹನಿಮೂನ್ ತಾಣಗಳು ಯಾವುವು ಎಂಬುದನ್ನು ಪರೀಕ್ಷಿಸುವುದು!

ಸಾಫ್ಟ್‌ವೇರ್ ಟೆಸ್ಟರ್‌ನಂತೆಯೇ ಹೊಸ ಉದ್ಯೋಗದ ಹೆಸರು ಹನಿಮೂನ್ ಟೆಸ್ಟರ್. ಈ ಉದ್ಯೋಗದ ಗುತ್ತಿಗೆ ಆರು ತಿಂಗಳು ಮಾತ್ರ. ಐಷಾರಾಮಿ ಜೀವನ ಇಷ್ಟಪಡುವ ದಂಪತಿಗೆ ಇದೊಂದು ಅಮೂಲ್ಯ ಅವಕಾಶ. ಕನಸಿನ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಮತ್ತೊಂದು ಹೊಸ ಕ್ಷೇತ್ರವಿದು. ಇದು ರನ್ಅವೇ‌ಬ್ರೈಡ್ಆಂಡ್‌ಗ್ರೂಮ್ ಡಾಟ್ ಕಾಂನ ಹೊಸ ಮಾರುಕಟ್ಟೆ ಪ್ರೋತ್ಸಾಹಕ ತಂತ್ರದ ಭಾಗ.

ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ನಡೆದ 'ವಿಶ್ವದ ಅತ್ಯುತ್ತಮ ಉದ್ಯೋಗ' ಶೋಧ ಕಾರ್ಯಕ್ರಮದಿಂದ ಉತ್ತೇಜಿತರಾಗಿರುವ ಈ ಐರಿಷ್ ಪ್ರವಾಸ ಸಂಸ್ಥೆ ಈ ವಿನೂತನ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ದಂಪತಿಗಳಿಂದ ಈ ಉದ್ಯೋಗಕ್ಕೆ ಅರ್ಜಿ ಬಂದಿದೆ ಎಂದಿದ್ದಾರೆ ಸಂಸ್ಥೆಯ ಆಡಳಿತ ನಿರ್ದೇಶಕಿ ರೋಸ್‌ಮೇರೀ ಮೆಲೀಡಿ. ಇದರಲ್ಲಿ ಭಾರತದಿಂದಲೂ ಅರ್ಜಿಗಳು ಬಂದಿವೆಯಂತೆ. ಜೊತೆಗೆ ಚೀನಾ, ಕೊರಿಯಾ, ಮೆಸಿಡೋನಿಯಾ, ಕ್ರೊಯೇಷಿಯಾದಿಂದಲೂ ದಂಪತಿಗಳು ಅರ್ಜಿ ಗುಜರಾಯಿಸಿದ್ದಾರೆ.

ವಿಜೇತರು ತಮ್ಮ ಅನುಭವಗಳನ್ನು ಬ್ಲಾಗ್‌ನಲ್ಲಿ ಬರೆಯಬೇಕಾಗುತ್ತದೆ ಮತ್ತು ತಿಂಗಳಿಗೊಮ್ಮೆ ಐರಿಷ್ ಟೈಮ್ಸ್ ಪತ್ರಿಕೆಗೂ ಅಂಕಣ ಬರೆಯಬೇಕು. ಜೊತೆಗೆ 20 ಸಾವಿರ ಯೂರೋ (ಸುಮಾರು 12 ಲಕ್ಷ ರೂ.) ಕೂಡ ಸಂಭಾವನೆ ದೊರೆಯಲಿದೆ. ಆಸಕ್ತಿ ಇದ್ದವರು ಅದೃಷ್ಟ ಪರೀಕ್ಷಿಸಬಹುದು!
ಸಂಬಂಧಿತ ಮಾಹಿತಿ ಹುಡುಕಿ