ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ: ಗಿಲಾನಿಗೆ ಉಗ್ರರ ವಿರುದ್ಧ ಹೆಚ್ಚಿನ ಸಾಕ್ಷಿ ಬೇಕಂತೆ (Pakistan | Yusuf Raza Gilani | LeT | Manmohan Singh | Barack Obama)
Bookmark and Share Feedback Print
 
ಮುಂಬೈ ದಾಳಿಯಲ್ಲಿ ಲಷ್ಕರ ಉಗ್ರರ ಕೈವಾಡವಿದೆ ಎನ್ನುವ ಬಗ್ಗೆ ಭಾರತ, ಹೆಚ್ಚಿನ ಸಾಕ್ಷಾಧಾರಗಳನ್ನು ಒದಗಿಸಿದಲ್ಲಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಯುಸೂಫ್ ರಝಾ ಗಿಲಾನಿ ಮತ್ತೆ ಹಳೆಯ ರಾಗ ಹಾಡಿದ್ದಾರೆ.

ಪ್ರತ್ಯೇಕತಾವಾದಿಗಳು ಪಾಕಿಸ್ತಾನವನ್ನು ಮೂಲವಾಗಿಸಿಕೊಂಡು ಭಾರತದ ಮೇಲೆ ದಾಳಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲವೆಂದು ಘೋಷಿಸಿದ ಪಾಕ್ ಪ್ರಧಾನಿ ಯುಸೂಫ್ ರಝಾ ಗಿಲಾನಿ, ನೆರೆ ರಾಷ್ಟ್ರಗಳೊಂದಿಗಿನ ಉದ್ರಿಕ್ತತೆಯನ್ನು ತಿಳಿಗೊಳಿಸಲು ಅಮೆರಿಕ ಸಹಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸರಕಾರ ಈಗಾಗಲೇ ಲಷ್ಕರ್-ಎ-ತೊಯಿಬಾ ಸಂಘಟನೆಯನ್ನು ನಿಷೇಧಿಸಿ, ಬ್ಯಾಂಕ್‌ ಖಾತೆಗಳನ್ನು ಕೂಡಾ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಲಷ್ಕರ್ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ, ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಳವಳವನ್ನು ಅಮೆರಿಕ ಅದ್ಯಕ್ಷ ಬರಾಕ್ ಒಬಾಮಾ ತಮಗೆ ಹೇಳಿರುವುದನ್ನು ಗಿಲಾನಿ ಖಚಿತಪಡಿಸಿದ್ದಾರೆ.

ಒಂದು ವೇಳೆ ನಮ್ಮ ಬಳಿ ಹೆಚ್ಚಿನ ಸಾಕ್ಷಾಧಾರಗಳಿದ್ದಲ್ಲಿ ಲಷ್ಕರ್ ಉಗ್ರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬಹುದಾಗಿದೆ.ಯಾವುದೇ ದೇಶದ ವಿರುದ್ಧದ ದಾಳಿಗೆ ನಮ್ಮ ನೆಲವನ್ನು ಬಳಸಲು ಬಿಡುವುದಿಲ್ಲ ಎಂದು ಗಿಲಾನಿ ಭರವಸೆ ನೀಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ನಿರುಪಮಾ ರಾವ್ ಮಾತನಾಡಿ, ಇಸ್ಲಾಮಾಬಾದ್ ಮತ್ತು ನವದೆಹಲಿಯ ಉದ್ರಿಕ್ತೆಯನ್ನು ಕಡಿಮೆಗೊಳಿಸಲು, ಮುಂಬೈಯಲ್ಲಿ ದಾಳಿ ನಡೆಸಿದ ಉಗ್ರರ ವಿರುದ್ಧ ಕಠಿಣ ಕ್ರಮಕ್ಕಾಗಿ ಪಾಕ್‌ಗೆ ತಾಕೀತು ಮಾಡುವಂತೆ, ಪ್ರಧಾನಿ ಮನಮೋಹನ್ ಸಿಂಗ್ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾಗೆ ಒತ್ತಾಯಿಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ತಮ್ಮೊಂದಿಗೆ ಚರ್ಚಿಸಿದ್ದು,ಭಾರತ ಮತ್ತು ಪಾಕಿಸ್ತಾನದ ಮದ್ಯೆ ಉತ್ತಮ ಬಾಂಧವ್ಯ ಬಯಸಿದ್ದಾರೆ. ಉಭಯ ದೇಶಗಳಲ್ಲಿ ಪರಸ್ಪರ ವಿಶ್ವಾಸ ಮೂಡಿಸುವ ಪಾತ್ರವಹಿಸುವುದಾಗಿ ಹೇಳಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಯುಸೂಫ್ ರಝಾ ಗಿಲಾನಿ ಮಾಹಿತಿ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ