ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನದಿಗುರುಳಿದ ಇಂಡೋನೇಷ್ಯಾ ವಿಮಾನ; 20 ಮಂದಿ ಗಾಯ (Plane mishap | Merpati Airline I Insonesia | Jakarta)
Bookmark and Share Feedback Print
 
ಮೆರ್ಪಾಟಿ ಏರ್‌ಲೈನ್ಸ್‌ನ ವಿಮಾನವೊಂದು ಇಂಡೋನೇಷ್ಯಾದ ಪಪ್ಪುವಾ ಪ್ರಾಂತ್ಯದಲ್ಲಿ ನದಿಗೆ ಉರುಳಿದ್ದು, ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ಈ ಘಟನೆ ನಡೆದಿದ್ದು, ರನ್‌ವೇಯಲ್ಲಿ ಇಳಿದಿದ್ದ ವಿಮಾನ ಮಳೆಯ ಕಾರಣದಿಂದ ಸ್ಕಿಡ್ ಆಗಿ ವಿಮಾನ ನಿಲ್ದಾಣದ ಪಕ್ಕದ ನದಿಗೆ ಉರುಳಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನ ಮೂತಿ ನದಿ ನೀರಿನಲ್ಲಿ ಮುಳುಗಿದೆ. ಘಟನೆಯಿಂದಾಗಿ ವಿಮಾನ ಎರಡು ಭಾಗವಾಗಿ ತುಂಡರಿಸಲ್ಪಟಿದೆ.

ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ 100 ಮಂದಿ ಪ್ರಯಾಣಿಕರಿದ್ದ ವಿಮಾನವು ರನ್‌ವೇಯಿಂದ 700 ಅಡಿಗಳಷ್ಟು ಚಲಿಸಿದ ತಕ್ಷಣ ಅವಘಡಕ್ಕೀಡಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆಯೆಂದು ವರದಿಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ