ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತಕ್ಕೆ ಖಾಯಂ ಸ್ಥಾನ; ಮೊರಕ್ಕೊ ಪ್ರತಿಜ್ಞಾಬದ್ಧ (India | Morocco | United Nations | Security Council)
Bookmark and Share Feedback Print
 
ವಿಶ್ವಸಂಸ್ಧೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ನೀಡಬೇಕೆಂಬ ಬೇಡಿಕೆಗೆ ಮೊರಕ್ಕೊ ಬೆಂಬಲ ಸೂಚಿಸಲಿದ್ದು, ಭಾರತದೊಂದಿಗೆ ಆರ್ಥಿಕ ಹಾಗೂ ವಾಣಿಜ್ಯ ರಂಗಗಳಲ್ಲಿ ಸಹಕರಿಸಿ ಕೆಲಸ ಮಾಡಲು ನಿರ್ಧರಿಸಿದೆ.

ಭಾರತ ಪ್ರಧಾನ ಮಂತ್ರಿ ಮನ್‌ಮೋಹನ್ ಸಿಂಗ್ ಜೊತೆ ನಡೆಸಿದ ಮಾತುಕತೆಯಲ್ಲಿ ಮೊರಕ್ಕೊದ ಪ್ರಧಾನಿ ಅಬ್ಬಾಸ್ ಇಲ್ ಫಾಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಲು ಭಾರತಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ತಿಳಿಸಿದ್ದಾರೆ.

ವಾಣಿಜ್ಯಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಶೀಘ್ರದಲ್ಲೇ ದೆಹಲಿ ವೇದಿಕೆಯಾಗಲಿದೆ.

ಭಯೋತ್ಪಾದನೆ ವಿರುದ್ಧ ಒಂದೇ ಸ್ವರದಲ್ಲಿ ಧ್ವನಿಯೆತ್ತಿದ್ದ ಎರಡೂ ದೇಶಗಳು ಇದರ ವಿರುದ್ಧ ಕಾರ್ಯಚರಿಸಲು ಗುಪ್ತಚರ ವಿಭಾಗದಲ್ಲಿ ಸಹಕರಿಸಿ ಕೆಲಸ ಮಾಡುವ ಕುರಿತಂತೆ ನಿರ್ಣಯ ಕೂಡಾ ಕೈಗೊಳ್ಳಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ