ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಣುಶಕ್ತಿಯ ಜತೆ ನಾಗರಿಕ ಪರಮಾಣು ಒಪ್ಪಂದ: ಪಾಕ್ ಇಂಗಿತ (Pakistan | Yusuf Raza Gilani | civil nuclear deal | America)
Bookmark and Share Feedback Print
 
ಭಾರತದ ಜತೆ ಅಮೆರಿಕಾ ಮಾಡಿಕೊಂಡಿರುವ ಮಾದರಿಯ ನಾಗರಿಕ ಪರಮಾಣು ಒಪ್ಪಂದ ಮತ್ತು ಇತರ ಅಣು ಶಕ್ತಿಗಳ ಒಪ್ಪಂದಗಳ ಕುರಿತ ನಿಲುವನ್ನು ಮುಂದುವರಿಸಿರುವ ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ, ಯಾವುದೇ ತಾರತಮ್ಯವಿಲ್ಲದೆ ತನ್ನ ದೇಶಕ್ಕೆ ತಂತ್ರಜ್ಞಾನಗಳ ಬಳಕೆಗೆ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ವಾಷಿಂಗ್ಟನ್‌ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ, ವಿಶ್ವದ 47 ರಾಷ್ಟ್ರಗಳು ಭಾಗವಹಿಸುವ ಪರಮಾಣು ಸುರಕ್ಷತಾ ಸಮಾವೇಶಕ್ಕೂ ಮೊದಲು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ವಿಶ್ವ ನಾಯಕರಿಗೆ ಏರ್ಪಡಿಸಿದ್ದ ಔತಣ ಕೂಟದಲ್ಲಿ ಪಾಕ್ ಪ್ರಧಾನಿ ಈ ವಿಷಯವನ್ನು ಪ್ರಸ್ತಾಪಿಸಿದರು.

ಭಾರತದ ಜೊತೆ ಮಾಡಿಕೊಂಡಿರುವ ಮಾದರಿಯ ಒಪ್ಪಂದವನ್ನು ತನ್ನ ಜತೆಗೂ ಮಾಡಿಕೊಳ್ಳಬೇಕೆಂದು ಪಾಕಿಸ್ತಾನ ಆಗ್ರಹಿಸುತ್ತಿದೆ. ಆದರೆ ಅಮೆರಿಕಾ ಇದುವರೆಗೂ ಅದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿಲ್ಲ.

ಶೃಂಗಸಭೆ ಆರಂಭವಾಗುತ್ತಿದ್ದಂತೆ ರಾಷ್ಟ್ರೀಯ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಗಿಲಾನಿ, ದೇಶದ ತಂತ್ರಜ್ಞಾನ ರಂಗದಲ್ಲಿ ನಾಗರಿಕ ಪರಮಾಣು ಒಪ್ಪಂದ ಅಗತ್ಯದ ಕುರಿತು ತನ್ನ ನಿಲುವನ್ನು ಪುನರುಚ್ಛರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ