ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಗಳ ಆಟಕ್ಕಾಗಿ ಮಾಧ್ಯಮಗಳಿಂದ ತಪ್ಪಿಸಿಕೊಂಡ ಒಬಾಮಾ (Barack Obama | US President | Yousuf Raza Gilani | White House)
Bookmark and Share Feedback Print
 
ಮಗಳ ಪುಟ್ಬಾಲ್ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ನೂರಾರು ವರ್ಷಗಳ ಸಂಪ್ರದಾಯವನ್ನು ಮುರಿದು ಮಾಧ್ಯಮಗಳಿಂದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ತಪ್ಪಿಸಿಕೊಂಡ ಘಟನೆ ನಡೆದಿದೆ.

ಈ ವಿಷಯವನ್ನು ಪಾಕಿಸ್ತಾನ ಅಧ್ಯಕ್ಷ ಯೂಸುಫ್ ರಾಜಾ ಗಿಲಾನಿ ಜತೆಗಿನ ಮಾತುಕತೆ ವೇಳೆ ಸ್ವತಃ ಒಬಾಮಾ ಬಹಿರಂಗಪಡಿಸಿದ್ದಾರೆ.

ನಾನು ಸಮಸ್ಯೆಯೊಂದಕ್ಕೆ ಕಾರಣವಾಗಿದ್ದೆ ಎಂದವರು ಹೇಳಿದರು. ನನ್ನ ಪ್ರವೃತ್ತಿ ಮಾಧ್ಯಮದವರಿಗೆ ಇಷ್ಟವಾಗಿರಲಿಲ್ಲ ಎಂದವರು ಹೇಳಿದರು. ಅವರು ಈ ಬಗ್ಗೆ ಅಸಮಾಧಾನಗೊಂಡಿದ್ದರು. ನನ್ನ ಪಾಲಿಗೆ ಇಂದೊಂದು ದೊಡ್ಡ ವಾರ್ತೆ ಎಂದವರು ಗಿಲಾನಿಗೆ ತಿಳಿಸಿದರು.

ಆದರೆ ಮಲಿಯಾ ಮತ್ತು ಶಾಷಾ ಎಂಬ ಇಬ್ಬರು ಹೆಣ್ಣು ಮಕ್ಕಳಲ್ಲಿ ಯಾರ ಆಟ ನೋಡಲು ಅಮೆರಿಕಾ ಅಧ್ಯಕ್ಷರು ತೆರಳಿದ್ದಾರೆಂಬದು ತಿಳಿದು ಬಂದಿಲ್ಲ.

ಆದರೆ ಪರ್ತಕರ್ತರಿಗೆ ತಿಳಿಸದೇ ಶ್ವೇತ ಭವನದಿಂದ ಹೊರಬಿದ್ದ ಒಬಾಮಾರವರು, ಅಲ್ಲಿ ಅನೇಕ ಸಮಯದಿಂದ ಕಾಯ್ದುಕೊಂಡು ಬರಲಾಗುತ್ತಿರುವ ಸಂಪ್ರಾದಾಯ ಹಾಗೂ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ