ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೋಯಬ್-ಸಾನಿಯಾ ಔತಣಕೂಟದ ಭಕ್ಷ್ಯಕ್ಕೆ ಕಾನೂನು ಅಡ್ಡಿ! (Shoaib Malik | Sania Mirza | Marriage | Tennis | Cricket)
Bookmark and Share Feedback Print
 
PTI
ಪಾಕಿಸ್ತಾನಿ ಕ್ರಿಕೆಟಿಗ ಶೋಯಬ್ ಮಲಿಕ್ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ವಿವಾಹವಾಗಿ, ಲಾಹೋರ್‌ನಲ್ಲಿ ಭರ್ಜರಿ ಔತಣಕೂಟ ಏರ್ಪಡಿಸಲು ಬಯಸಿದ್ದರು. ಆದರೆ ಅವರ ಈ ಆಸೆ ಕೈಗೂಡಲು ಕಾನೂನು ಅಡ್ಡಿಯಾಗಿದೆ. ಹೇಗಂತೀರಾ? ಮದುವೆ ಸಮಾರಂಭದಲ್ಲಿ ಒಂದಕ್ಕಿಂತ ಹೆಚ್ಚು ವ್ಯಂಜನವನ್ನು ವಿತರಿಸುವಂತಿಲ್ಲ ಎಂಬ ಅಧಿಕೃತ ನಿಷೇಧ ಅಲ್ಲಿ ಜಾರಿಯಲ್ಲಿದೆ!

ಲಾಹೋರಿನ ಪರ್ಲ್ ಕಾಂಟಿನೆಂಟಲ್ ಹೋಟೆಲಿನಲ್ಲಿ ಸುಮಾರು 500 ಮಂದಿಗೆ ಏಪ್ರಿಲ್ 22ರಂದು ವಲೀಮಾ (ಔತಣಕೂಟ) ಏರ್ಪಡಿಸಲು ಶೋಯಬ್ ಸಿದ್ಧತೆ ನಡೆಸಿದ್ದರು. ಆದರೆ ಅಧಿಕೃತ ನಿಯಮಾವಳಿಗಳ ಪ್ರಕಾರ ಶೋಯಬ್ ತನ್ನ ಅತಿಥಿಗಳಿಗೆ ವೈವಿಧ್ಯಮಯ ಭಕ್ಷ್ಯಗಳನ್ನು ನೀಡುವಂತಿಲ್ಲ.

ಅನ್ನ, ಚಿಕನ್ ಸಲಾನ್ (ಗ್ರೇವಿಯುಳ್ಳ ವ್ಯಂಜನ), ರೋಟಿ ಮತ್ತು ನಾನ್ ನೀಡುವಂತೆ ಶೋಯಬ್ ಹೋಟೆಲ್ ಆಡಳಿತವನ್ನು ಕೋರಿದ್ದರು. ಇದರೊಂದಿಗೆ, ಶೋಯಬ್‌ನ ಭಾರತೀಯ ಗೆಳೆಯರಿಗಾಗಿ ಪ್ರತ್ಯೇಕವಾಗಿ ಸಸ್ಯಾಹಾರಿ ಆಹಾರ ಸಿದ್ಧಪಡಿಸುವಂತೆಯೂ ಕೋರಿದ್ದರು. ಅದರಲ್ಲಿ ಗುಲಾಬ್ ಜಾಮೂನ್ ಮತ್ತು ರಸಮಲೈ ಸೇರಿದೆ.

ಇದೀಗ, ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರಕಾರದ ಆದೇಶವನ್ನು ನಾವು ಪಾಲಿಸಲೇಬೇಕಾಗಿದೆ ಎನ್ನುತ್ತಾರೆ ಹೋಟೆಲ್‌ನ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಅಲಿಯಾ ತಾರೀಖ್.

ಪಾಕಿಸ್ತಾನದ ಪಂಜಾಬ್ ಪ್ರಾಂತೀಯ ಸರಕಾರವು ಕೈಗೊಂಡಿರುವ ಮಿತವ್ಯಯ ಕ್ರಮಗಳ ಅನುಸಾರ, ವಿವಾಹ ಮತ್ತು ಔತಣಕೂಟ ಕಾರ್ಯಕ್ರಮಗಳಿಗೆ ಒಂದು ಭಕ್ಷ್ಯವನ್ನು ಮಾತ್ರ ನೀಡಬಹುದು ಎಂಬ ನಿಯಮವನ್ನು ಜಾರಿಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ