ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆ; ಯುಎನ್ ತನಿಖಾ ವರದಿ ಇಂದು ಬಿಡುಗಡೆ (UNO | Pakistan | Benazir Bhutto | UN panel)
Bookmark and Share Feedback Print
 
ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಿದ್ದ ವಿಶ್ವಸಂಸ್ಥೆಯ ಸ್ವತಂತ್ರ ಸಮಿತಿಯು ತನ್ನ ವರದಿಯನ್ನು ಇಂದು ಬಿಡುಗಡೆಗೊಳಿಸಲಿದೆ.

ಮಾರ್ಚ್ 30ರಂದೇ ಬಿಡುಗಡೆಗೊಳ್ಳಬೇಕಾಗಿದ್ದ ವರದಿಗೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್, ಅಫಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಮತ್ತು ಸೌದಿ ಅರೇಬಿಯಾಗಳ ಮಾಹಿತಿಯನ್ನು ಸೇರಿಸುವಂತೆ ಪಾಕಿಸ್ತಾನದ ಮಾಡಿಕೊಂಡಿದ್ದ ಮನವಿ ಹಿನ್ನೆಲೆಯಲ್ಲಿ ಎರಡು ವಾರಗಳ ನಂತರ ತಡವಾಗಿ ಬಿಡುಗಡೆಗೆ ಸಿದ್ಧಗೊಂಡಿದೆ.

ಆದರೆ ವಿಶ್ವಸಂಸ್ಥೆಯ ಚಿಲಿ ರಾಯಭಾರಿ ಹೇರಾಲ್ಡ್ ನೇತೃತ್ವ ವಹಿಸಿರುವ ಮೂರು ಮಂದಿ ಸದಸ್ಯರ ತನಿಖಾ ಸಮಿತಿ ತನ್ನ ವರದಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

2007ನೇ ಇಸವಿಯಲ್ಲಿ ಭುಟ್ಟೋ ಹತ್ಯೆ ಮಾಡಲಾಗಿತ್ತು.

ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆ ಪ್ರಕರಣದ ವಾಸ್ತವ ಸಂಗತಿಯನ್ನು ಬಹಿರಂಗಪಡಿಸಲು ತನಿಖೆಗಾಗಿ ನೇಮಿಸಲಾಗಿರುವ ಸಮಿತಿಯು ತನ್ನ ವರದಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಅವರಿಗೆ ಗುರುವಾರ ಅಪರಾಹ್ನ ಸಲ್ಲಿಸಲಿದೆ ಎಂದು ವಿಶ್ವಸಂಸ್ಥೆ ವಕ್ತಾರ ಮಾರ್ಟಿನ್ ನೆಸಿರ್ಕಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ