ಆಸ್ಟ್ರೇಲಿಯಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಹಲ್ಲೆ
ಮೆಲ್ಬೋರ್ನ್, ಗುರುವಾರ, 15 ಏಪ್ರಿಲ್ 2010( 18:25 IST )
ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲಿನ ದಾಳಿ ಮುಂದುವರಿಯುತ್ತಿದ್ದು, ಇತ್ತೀಚಿನ ಘಟನೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿರುವುದು ಬೆಳಕಿಗೆ ಬಂದಿದೆ.
ಇದು ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದ್ವೇಷ ಮುಂದುವರಿಯುತ್ತಿರುವುದಕ್ಕೆ ಸಿಕ್ಕಿರುವ ಮತ್ತೊಂದು ಉದಾಹರಣೆ.
ಈ ಘಟನೆ ನಡೆದಿರುವುದು ಮೆಲ್ಪೋರ್ನ್ ಅಕ್ವೆರಿಯಂ ಸಮೀಪ. ನಿರಾಜ್ ಭಾರದ್ವಾಜ್ ಎಂಬ 23ರ ಹರೆಯದ ಭಾರತೀಯ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಆತ ಎಡಗಣ್ಣು ತೀವ್ರ ಘಾಸಿಗೊಂಡಿದೆ. ಮೂಗು ಮತ್ತು ಎದೆ ಭಾಗಕ್ಕೂ ತೀವ್ರ ಗಾಯಗಳಾಗಿವೆ ಎಂದು ವರದಿಗಳು ತಿಳಿವೆ.
ಪಾನಮತ್ತರಾಗಿದ್ದ ಇಬ್ಬರು ಅಪರಿಚಿತರು ಸೇರಿ ಭಾರಾಧ್ವಾಜ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ದೇಶವನ್ನು ಬಿಟ್ಟು ತೆರಳುವಂತೆ ಅವರು ಆಜ್ಞಾಪಿಸುತ್ತಿದ್ದರು ಎಂದು ಬಲಿಪಶು ತಿಳಿಸಿದ್ದಾನೆ.
ವೈದ್ಯರ ಪ್ರಕಾರ ಭಾರಧ್ವಾಜ್ ಎಡಗಣ್ಣು ಪೂರ್ವ ಸ್ಥಿತಿಗೆ ಮರಳುವುದು ಕಷ್ಟ.
ಇದೀಗ ಯಾವುದೇ ಕೆಲಸ ಮಾಡಲು ಅಶಕ್ತನಾಗಿರುವ ಭಾರಧ್ವಾಜ್‌ಗೆ ಮನೆಯಿಂದ ಹೊರಗೆ ಬರಲು ಹೆದರಿಕೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ. ನನಗೆ ಉಜ್ವಲ ಭವಿಷ್ಯವಿತ್ತಾದರೂ, ಕ್ರಿಮಿನಲ್‌ಗಳು ಅದನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ಈ ದೇಶದಲ್ಲಿ, ಈ ನಗರದಲ್ಲಿ ನಾನು ಸುರಕ್ಷಿತನಾಗಿಲ್ಲ ಎಂದು ಆತ ತಿಳಿಸಿದ್ದಾನೆ.