ಹೌದು, ಭಾರತದಲ್ಲಿ ಪಾಯಿಖಾನೆಗಳ ಸಂಖ್ಯೆಗಳಿಗಿಂತಲೂ ಸೆಲ್‌ಫೋನ್‌ಗಳು ಹೆಚ್ಚಿವೆಯಂತೆ. ಭಾರೀ ಆರ್ಥಿಕ ಪ್ರಗತಿ ಸಾಧಿಸಿರುವ ಭಾರತದಲ್ಲಿ ಪ್ರಸಕ್ತ 545 ಮಿಲಿಯನ್ ಸೆಲ್‌ಫೋನ್‌ಗಳು ಬಳಕೆಯಲ್ಲಿವೆ. ಆದರೆ ಶೌಚಾಲಯಗಳಿರುವುದು ಕೇವಲ 366 ಮಿಲಿಯನ್ ಮಾತ್ರ ಎಂದು ವರದಿಯೊಂದು ತಿಳಿಸಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ನಾಗಾಲೋಟ ಸಾಧನೆ ಮಾಡುತ್ತಿರುವ ಭಾರತವು ಸೆಲ್‌ಫೋನ್ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ದೂರ ಹೋಗಿದೆ. ಇದು 2015ರಲ್ಲಿ ಒಂದು ಬಿಲಿಯನ್ ತಲುಪುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆ ಯುನಿವರ್ಸಿಟಿ ಬುಧವಾರ ತಿಳಿಸಿದೆ.
ಆದರೆ ಈ ವರದಿಯ ಪ್ರಕಾರ ಮೂಲಭೂತ ಅವಶ್ಯಕತೆಯೆನಿಸುವ ಶೌಚಾಲಯಯಿರುವುದು ಕೇವಲ 366 ಮಿಲಿಯನ್ ಅಥವಾ ಒಂದು ಬಿಲಿಯನ್ ಜನಸಂಖ್ಯೆ ಹೊಂದಿರುವ ಬೃಹತ್ ದೇಶದ ಶೇಕಡಾ 31ರಷ್ಟು ಮಂದಿ ಮಾತ್ರ ಶೌಚಾಲಯ ಸೌಲಭ್ಯ ಹೊಂದಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಮೊಬೈಲ್ ಫೋನ್ ಬಳಕೆಯಲ್ಲಿ ಭಾರತ ಭಾರೀ ಪ್ರಗತಿ ಕಂಡಿದೆ. 2000ನೇ ಇಸವಿಯಲ್ಲಿ 100 ಮಂದಿಗೆ ಶೇಕಡಾ 0.35ರಷ್ಟಿದ್ದ ಈ ಪ್ರಮಾಣವು, 2010ಕ್ಕಾಗುವಾಗ 100 ಮಂದಿಗೆ 45ಕ್ಕೆ ತಲುಪಿದೆ. ಅಂದರೆ ಪ್ರಸಕ್ತ 100 ಮಂದಿಯಲ್ಲಿ 45 ಮಂದಿ ಮೊಬೈಲ್ ಬಳಸುತ್ತಿದ್ದಾರೆ.