ವಾಷಿಂಗ್ಟನ್, ಶುಕ್ರವಾರ, 16 ಏಪ್ರಿಲ್ 2010( 15:37 IST )
ಭಾರತ ಹಾಗೂ ಪಾಕಿಸ್ತಾನಗಳ ಪರಮಾಣು ಕಾರ್ಯಕ್ರಮಗಳ ಕುರಿತು ಆ ದೇಶಗಳೊಂದಿಗೆ ಅಮೆರಿಕಾ ಮಾತುಕತೆ ನಡೆಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾರ ಆಡಳಿತದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವು ಭಾರತ ಮತ್ತು ಪಾಕಿಸ್ತಾನ ಜೊತೆ ಅಣ್ವಸ್ತ್ರ ಕಾರ್ಯಕ್ರಮ ಮತ್ತು ಅವರ ಹೊಣೆಗಾರಿಕೆ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಡೈಲಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಸಾರ್ವಜನಿಕ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಪಿ. ಜೆ. ಕ್ರೊವ್ಲೆ ತಿಳಿಸಿದ್ದಾರೆ.
ಭಾನುವಾರ ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರನ್ನು ಭೇಟಿ ಮಾಡಿದ ಅಮೆರಿಕಾ ಅಧ್ಯಕ್ಷರು, ದ್ವಿಪಕ್ಷೀಯ ಸಂಬಂಧ ಹಾಗೂ ಪ್ರಾದೇಶಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು.