ಚೀನಾದ ಕ್ವಿಂಗ್‌ಹೈ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರೂ, ಇಲ್ಲಿನ ತಾತ್ಕಾಲಿಕ ಆರೋಗ್ಯ ಕೇಂದ್ರವೊಂದರಲ್ಲಿ ನವಜಾತ ಶಿಶುವೊಂದರ ಅಳು ಕೇಳಿ ಬಂದಿರುವುದರಿಂದ ದುಃಖ ಪೀಡಿತರ ಮುಖದಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ಭೂಕಂಪ ಪೀಡಿತರಿಗೆಂದು ತಾತ್ಕಾಲಿಕ ಶಿಬಿರಗಳನ್ನು ಅಲ್ಲಲ್ಲಿ ತೆರೆಯಲಾಗಿದ್ದು, ಅಂತಹ ಡೇರೆಗಳಲ್ಲಿ ಮಕ್ಕಳು ಹುಟ್ಟುತ್ತಿವೆ.
ವೈದ್ಯರುಗಳ ಪ್ರಕಾರ ಅತೀ ಭಯಂಕರ ಭೂಕಂಪದ ನಂತರ ಇಲ್ಲಿ ಹುಟ್ಟಿದ ಮೊದಲ ಶಿಶು ಇದಾಗಿದೆ. ಇದು ಭೂಕಂಪ ಪೀಡಿತ ಪ್ರದೇಶದಲ್ಲಿ ಭರವಸೆ ಹುಟ್ಟಿಸಲು ಕಾರಣವಾಗಿದೆಯೆಂದು ಮಗುವೊಂದಕ್ಕೆ ಚಿಕಿತ್ಸೆ ನೀಡಿರುವ ಡಾ. ಹುವಾಂಗ್ ಚಾಂಗ್‌ಮಿ ತಿಳಿಸಿದ್ದಾರೆ.
ಚೀನಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.