ವಾಷಿಂಗ್ಟನ್, ಶುಕ್ರವಾರ, 16 ಏಪ್ರಿಲ್ 2010( 17:05 IST )
ತಮ್ಮ ಪುಸ್ತಕಗಳ ಮಾರಾಟದ ಭರಾಟೆ ಮೂಲಕ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪತ್ನಿ ಮಿಚ್ಚೆಲ್ ಒಬಾಮಾ 2009ರ ಸಾಲಿನಲ್ಲಿ 5.5 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ. ಇದರಲ್ಲಿ ಆದಾಯ ತೆರಿಗೆ ರೂಪದಲ್ಲಿ 1.79 ಮಿಲಿಯನ್ ಡಾಲರ್ ಪಾವತಿಸಿದ್ದಾರೆಂದು ಶ್ವೇತಭವನ ಗುರುವಾರ ಸ್ಪಷ್ಟಪಡಿಸಿದೆ.
ಮೂಲಗಳ ಪ್ರಕಾರ ಅಮೆರಿಕಾ ಅಧ್ಯಕ್ಷರಾದ ನಂತರ ಒಬಾಮಾ ಹಾಗೂ ಮೊದಲ ಮಹಿಳೆ ಮಿಚ್ಚೆಲ್ ಹಿಂದಿನಕ್ಕಿಂತಲೂ ಹೆಚ್ಚು ಶ್ರೀಮಂತರಾಗಿದ್ದಾರೆ. ಆದರೆ ಇದು ಅವರ ಪುಸ್ತಕಗಳ ಮಾರಾಟದಿಂದಲೇ ಆಗಿದೆ.
'ಡ್ರೀಮ್ಸ್ ಫ್ರಮ್ ಮೈ ಫಾದರ್' ಮತ್ತು 'ದಿ ಆಡಸಿಡಿ ಆಫ್ ಹೋಪ್: ಥಾಟ್ಸ್ ಆನ್ ರಿಕ್ಲೈಮಿಂಗ್ ದಿ ಅಮೆರಿಕನ್ ಡ್ರೀಮ್ಸ್' ಎಂಬ ಎರಡು ಪುಸ್ತಕಗಳು ಒಬಾಮಾ ಅಧ್ಯಕ್ಷರಾಗುವ ಮೊದಲೇ ಪ್ರಕಟಗೊಂಡಿದ್ದು, ಅತೀ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ.
2008ರಲ್ಲಿ 2,656,902 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದ ಇವರು 2009ರಲ್ಲಿ ಅದು 5,505,409ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ತೆರಿಗೆಯಾಗಿ ಒಬಾಮಾ-ಮಿಚ್ಚೆಲ್ 163,303 ಡಾಲರ್ ಪಾವತಿಸಿದ್ದಾರೆ.
ಅದೇ ವೇಳೆ ಒಬಾಮಾ 40 ಧರ್ಮ ಸಂಸ್ಥೆಗಳಿಗಾಗಿ 329100 ಮಿಲಿಯನ್ ಅಮೆರಿಕನ್ ಡಾಲರ್ ದಾನ ಮಾಡಿದ್ದರು. ಇದರಲ್ಲಿ ದಾರಿದ್ರ್ಯ ವಿರುದ್ಧ ಸಂಸ್ಥೆ ಕ್ಯಾರ್ ಮತ್ತು ಯುನೈಟೆಡ್ ನೆಗ್ರೊ ಕಾಲೇಜ್ ಫಂಡ್‌ಗೆ ತಲಾ 50,000 ಮಿಲಿಯನ್ ಅಮೆರಿಕನ್ ಡಾಲರ್ ದಾನ ನೀಡಿದ್ದರು.
ಶಾಂತಿಗಾಗಿ ನೊಬೆಲ್ ಅವಾರ್ಡ್ ಲಭಿಸಿದ ಸಂದರ್ಭದಲ್ಲಿಯೂ ಲಭಿಸಿದ 1.4 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತವನ್ನು ಕೂಡಾ ಒಬಾಮ ದಾನ ಮಾಡಿದ್ದರು.
ಅಮೆರಿಕಾ ಅಧ್ಯಕ್ಷರ ತೆರಿಗೆ ವರದಿಗಳನ್ನು ಶ್ವೇತಭವನವು ಏಪ್ರಿಲ್ 15ರಂದು ಬಿಡುಗಡೆಗೊಳಿಸಿತ್ತು. ಆದರೆ ಉಪಾಧ್ಯಕ್ಷ ಜೋ ಬಿಡೆನ್ ಮತ್ತು ಪತ್ನಿ ಜಿಲ್‌ರವರ ಸಂಪಾದನೆಯೂ ಒಬಾಮ-ಮಿಚ್ಚೆಲ್ ಜೋಡಿಗಿಂತ ಕಡಿಮೆಯೇ ಆಗಿದೆ.