ಮಕ್ಕಳ ಕಳ್ಳ ಸಾಗಾಟ ಮಾಡುವ ಮೂಲಕ ಹಣ ಸಂಪಾದಿಸುತ್ತಿದ್ದ ಮಹಿಳೆಯೊಬ್ಬಳಿಗೆ ಚೀನಾ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.
ಹುಬೈ ಪ್ರಾಂತ್ಯದ ಯೂ ಲಿಕ್ಸಿಯಾಂಗ್ ಗಲ್ಲು ಶಿಕ್ಷೆಗೊಳಗಾದ ಮಹಿಳೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಹೋದರಿ ಯೂ ಕ್ಸಿಯಾಫೆನ್ ಮತ್ತು ಡು ಮಿಂಗ್‌ಹುವಾರಿಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಯೂನಾನ್ ಪ್ರಾಂತ್ಯದಿಂದ 49 ಮಕ್ಕಳನ್ನು ಖರೀದಿಸಿದ್ದ 23 ಮಂದಿಯ ತಂಡವು ಆ ಮಕ್ಕಳನ್ನು ಹುಬೈ ಪ್ರಾಂತ್ಯದಲ್ಲಿ ಮಾರಾಟ ಮಾಡಲು ಉದ್ದೇಶಿಸಿತ್ತು ಎಂದು ತಪ್ಪೊಪ್ಪಿಗೆ ನೀಡಿತ್ತು.
2009ರ ಮೇ ಮತ್ತು ಜೂನ್ ತಿಂಗಳುಗಳ ಅವಧಿಯಲ್ಲಿ ಬೆಳಕಿಗೆ ಬಂದಿದ್ದ ಈ ಜಾಲವು ಹುಡುಗರನ್ನು ತಲಾ 40,000 ಯಾನ್ ಹಾಗೂ ಹುಡುಗಿಯರನ್ನು 20,000 ಯಾನ್‌ಗಳಿಗೆ ಮಾರಾಟ ಮಾಡುತ್ತಿತ್ತು. 2005ರ ಮಾರ್ಚ್‌ನಿಂದ 2009ರ ಜುಲೈ ನಡುವೆ ಈ ಅವ್ಯವಹಾರಗಳನ್ನು ನಡೆಸಲಾಗಿತ್ತು.
ಈ ಜಾಲದಲ್ಲಿ ಪಾಲ್ಗೊಂಡಿದ್ದ ಇತರ 20 ಮಂದಿಗೆ ಎರಡರಿಂದ 15 ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.