ಮೆಕ್ಸಿಕೊ ಸಿಟಿ, ಶನಿವಾರ, 17 ಏಪ್ರಿಲ್ 2010( 18:08 IST )
ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಪಾಠಗಳನ್ನು ಹೇಳುವ ಬಗ್ಗೆ ರೋಮನ್ ಕ್ಯಾಥೋಲಿಕ್ ಬಿಷಪ್ ಮುಂದಿಟ್ಟಿದ್ದ ವಾದವನ್ನು ಮೆಕ್ಸಿಕೊ ಶಿಕ್ಷಣ ತಜ್ಞರು ಮತ್ತು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಪಾಠ ಕಳಿಸುವುದರಿಂದ ಪಾದ್ರಿಗಳ ಬ್ರಹ್ಮಚರ್ಯ ಪಾಲನೆಗೆ ಧಕ್ಕೆಯಾಗುತ್ತದೆ ಎನ್ನುವುದು ಚರ್ಚ್ ವಾದವಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶೈಕ್ಷಣಿಕ ಕಾರ್ಯದರ್ಶಿ ಅಲಾನ್ಸೋ ಲುಜಾಂಬಿಯೊ, ನಮ್ಮ ಗಂಡು ಹಾಗೂ ಹೆಣ್ಣು ಮಕ್ಕಳು ಜವಾಬ್ದಾರಿಯುತರಾಗಿ ನಡೆದುಕೊಳ್ಳಬೇಕು, ತಮ್ಮ ನಡವಳಿಕೆಗಳ ಕುರಿತು ಹೊಣೆಗಾರಿಕೆಯನ್ನು ಅರಿತೊಳ್ಳಬೇಕು ಎಂಬ ಅಗತ್ಯವನ್ನು ಸರಕಾರಿ ಶಾಲೆಗಳಲ್ಲಿನ ಲೈಂಗಿಕ ಶಿಕ್ಷಣ ಪಾಠಗಳು ಒಳಗೊಂಡಿದೆ. ಅದಕ್ಕಾಗಿ ಅವರಿಗೆ ಬೇಕಾಗುವ ಮಾಹಿತಿಗಳನ್ನು ಈ ಪುಸ್ತಕಗಳು ಒಳಗೊಂಡಿವೆ ಎಂದವರು ಹೇಳಿದರು.
ಅದೇ ಹೊತ್ತಿಗೆ ಇಂತಹ ಕಾರ್ಯಕ್ರಮಗಳಿಂದ ಯಾವುದೇ ಸಾಮಾಜಿಕ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಪ್ಪಿಸುವ ಬಗ್ಗೆ ನಾವು ಎಚ್ಚರಿಕೆ ವಹಿಸಿದ್ದೇವೆ ಎಂದು ಲುಜಾಂಬಿಯೋ ತಿಳಿಸಿದ್ದಾರೆ.
ಲೈಂಗಿಕತೆಯನ್ನು ಸಾಮಾನ್ಯೀಕರಿಸಿದಷ್ಟು ಅದರ ಪ್ರಮಾಣ ಹೆಚ್ಚಬಹುದು, ಮುಕ್ತವೆನಿಸಬಹುದು ಎಂದು ಬಿಷಪ್ ಫಿಲಿಪ್ ಅರಿಜ್ಮೆಂಡಿ ಗುರುವಾರ ಆತಂಕ ವ್ಯಕ್ತಪಡಿಸಿದ್ದರು.