ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಕ್ರಮ ಸಂಬಂಧಗಳಿಂದಾಗಿ ಭೂಕಂಪ: ಇರಾನ್ ಧರ್ಮಗುರು (Extramarital sex | earthquake | Iranian cleric | Ayatollah Kazem Sedighi)
Bookmark and Share Feedback Print
 
ದೈಹಿಕ ಪ್ರದರ್ಶನಕ್ಕೆ ಅನುವಾಗುವಂತಹ ಅನುಚಿತವಾಗಿ ಬಟ್ಟೆ ಧರಿಸಿಕೊಂಡ ಸ್ತ್ರೀಯರಿಂದಾಗಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿದ್ದು, ಇದೇ ಕಾರಣದಿಂದ ದೇಶದಲ್ಲಿ ಭೂಕಂಪಗಳು ಹೆಚ್ಚೆಚ್ಚು ಸಂಭವಿಸುತ್ತಿವೆ ಎಂದು ಇರಾನ್‌ನ ಧಾರ್ಮಿಕ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸರಿಯಾಗಿ ಬಟ್ಟೆಯನ್ನು ಹಾಕಿಕೊಳ್ಳದ ಹಲವು ಮಹಿಳೆಯರಿಂದಾಗಿ ಯುವ ಜನತೆ ತಮ್ಮ ಪಾವಿತ್ರ್ಯತೆಗೆ ಕಳಂಕವನ್ನು ತಂದುಕೊಂಡು ಅಡ್ಡದಾರಿ ಹಿಡಿಯುತ್ತಾರೆ ಮತ್ತು ಸಮಾಜದಲ್ಲಿನ ವಿವಾಹೇತರ ಲೈಂಗಿಕ ಸಂಬಂಧಗಳಿಗೆ ಪ್ರಚೋದನೆ ನೀಡುತ್ತಾರೆ. ಇದರಿಂದಾಗಿ ಭೂಕಂಪಗಳು ಹೆಚ್ಚುತ್ತವೆ ಎಂದು ಟೆಹ್ರಾನ್‌ನಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಯತೊಲ್ಲಾಹ್ ಕಜೀಮ್ ಸೆಡಿಗೈ ತಿಳಿಸಿದ್ದಾರೆ.

ಈಗ ಸಂಭವಿಸುವ ವಿಪತ್ತುಗಳು ಮಾನವನ ಕೃತ್ಯಗಳ ಪ್ರತಿಫಲ. ನಮಗೆ ಬೇರೆ ದಾರಿಗಳಿಲ್ಲ. ಆದರೆ ಅಪಾಯಗಳನ್ನು ತಪ್ಪಿಸಿಕೊಳ್ಳಲು ಇಸ್ಲಾಮನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಅವರು ಹೇಳಿದ್ದಾರೆಂದು ಇರಾನ್ ಪತ್ರಿಕೆಗಳು ವರದಿ ಮಾಡಿವೆ.

ಕಳೆದ ಸರಿ ಸುಮಾರು ಮೂರು ದಶಕಗಳಿಂದ ಧಾರ್ಮಿಕ ಆಳ್ವಿಕೆಯಲ್ಲಿರುವ ಇರಾನ್‌ನಲ್ಲಿ ಇಸ್ಲಾಂಗೆ ಬದ್ಧವಾಗಿರುವಂತೆ ಬಟ್ಟೆಗಳನ್ನು ಧರಿಸುವುದು ಕಡ್ಡಾಯ. ದೇಶದಲ್ಲಿನ ಮಹಿಳೆ ಯಾವುದೇ ಧರ್ಮದವಳಾಗಿದ್ದರೂ, ಯಾವುದೇ ಕಾರಣಕ್ಕೂ ತನ್ನ ತಲೆಗೂದಲು ಮತ್ತು ದೇಹವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಇದನ್ನು ಉಲ್ಲಂಗಿಸುವವರಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಆದರೆ ನಗರೀಕರಣಕ್ಕೊಳಗಾಗಿರುವ ಮಹಿಳೆಯರು ಬಿಗಿ ಉಡುಪುಗಳನ್ನು ಧರಿಸುವುದು, ಫ್ಯಾಷನ್‌ಯುಕ್ತ ಶಾಲುಗಳನ್ನು ತಲೆಗೆ ಸುತ್ತಿಕೊಳ್ಳುವುದು ಮತ್ತು ಇತರ ಶೃಂಗಾರ ಮಾಡಿಕೊಳ್ಳುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ಇರಾನ್‌ನಲ್ಲಿ ಆಗಾಗ ನಡೆಯುವ ಭೂಕಂಪದಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇತ್ತೀಚಿನ ಬೃಹತ್ ಭೂಕಂಪ ನಡೆದಿರುವುದು 2003ರಲ್ಲಿ. ದಕ್ಷಿಣ ನಗರ ಬಾಮ್‌ನಲ್ಲಿ ನಡೆದಿದ್ದ ಈ ಭೂಕಂಪದಲ್ಲಿ 31,000 ಮಂದಿ ಅಂದರೆ ಈ ನಗರದ ಒಟ್ಟು ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟು ಜನತೆ ಸಾವನ್ನಪ್ಪಿದ್ದರು.
ಸಂಬಂಧಿತ ಮಾಹಿತಿ ಹುಡುಕಿ