ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆಗೆ ನಾನು ಜವಾಬ್ದಾರನಲ್ಲ: ಮುಶರಫ್ ಸ್ಪಷ್ಟನೆ (Pakistan | Pervez Musharraf | Benazir Bhutto | Shaukat Aziz)
Bookmark and Share Feedback Print
 
ಬೆನಜೀರ್ ಭುಟ್ಟೋ ಹತ್ಯೆ ನಡೆದ 2007ರ ಡಿಸೆಂಬರ್ 27ರ ಸಮಯದಲ್ಲಿ ತಾನು ಸರಕಾರದ ಮುಖ್ಯಸ್ಥ ಅಥವಾ ಸೇನೆಯ ಮುಖ್ಯಸ್ಥನಾಗಿರದ ಕಾರಣ ದುರ್ಘಟನೆಗೆ ನಾನು ಜವಾಬ್ದಾರನಲ್ಲ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಶರಫ್ ತಿಳಿಸಿದ್ದಾರೆ.

ಮಾಜಿ ಪ್ರಧಾನ ಮಂತ್ರಿಯ ಹತ್ಯೆಗೆ ಕಾರಣವಾದ ಭದ್ರತಾ ವೈಫಲ್ಯಕ್ಕೆ ಆಗಿನ ಸರಕಾರದ ಮುಖ್ಯಸ್ಥರನ್ನು ಪ್ರಶ್ನಿಸಬೇಕು ಎಂದು ಮಾಜಿ ಅಧ್ಯಕ್ಷ ಆಪ್ತರೊಬ್ಬರ ಮೂಲಕ ವಾಷಿಂಗ್ಟನ್‌ನಿಂದ ತಿಳಿಸಿದ್ದಾರೆ ಎಂದು 'ದಿ ನ್ಯೂಸ್' ಪತ್ರಿಕೆ ವರದಿ ಮಾಡಿದೆ.

ಬೆನಜೀರ್ ಹತ್ಯೆಯಾಗುವ ಸಂದರ್ಭದಲ್ಲಿ ಶೌಕಾತ್ ಅಜೀಜ್ ಪ್ರಧಾನ ಮಂತ್ರಿಯಾಗಿದ್ದರು. ಆಗ ಮುಶರಫ್ ಅಧ್ಯಕ್ಷರಾಗಿ ಸಂಪೂರ್ಣ ಅಧಿಕಾರ ಹೊಂದಿದ್ದರು. ಆದರೆ ಈಗ ಅಧ್ಯಕ್ಷರ ಅಧಿಕಾರವನ್ನು ಮರಳಿ ಪ್ರಧಾನ ಮಂತ್ರಿಯವರ ಕಚೇರಿಗೆ ನೀಡಲಾಗಿದೆ. ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಅಧ್ಯಕ್ಷರಿಂದ ಕಿತ್ತು ಪ್ರಧಾನಿಯವರಿಗೆ ವಹಿಸಲಾಗಿದೆ.

ಇತ್ತೀಚೆಗಷ್ಟೇ ಭುಟ್ಟೋ ಹತ್ಯೆ ಪ್ರಕರಣ ಸಂಬಂಧ ವರದಿ ಬಿಡುಗಡೆ ಮಾಡಿದ್ದ ವಿಶ್ವಸಂಸ್ಥೆಯ ಆಯೋಗವು, ಭದ್ರತಾ ಕೊರತೆಯೇ ಮಾಜಿ ಪ್ರಧಾನಿಯ ಹತ್ಯೆಗೆ ಹೇತುವಾಯಿತು ಎಂದು ಪಾಕಿಸ್ತಾನ ಆಡಳಿತದ ಮೇಲೆ ಆರೋಪ ಹೊರಿಸಿತ್ತು.

ಭುಟ್ಟೋ ಸಾವಿನ ಹಿಂದಿನ ಶಕ್ತಿಗಳನ್ನು ವಿಶ್ವಸಂಸ್ಥೆಯ ವರದಿಯು ಸ್ಪಷ್ಟವಾಗಿ ಹೇಳಲು ವಿಫಲವಾಗಿದ್ದರೂ, ಮುಶರಫ್ ಸರಕಾರವು ತಕ್ಷಣಕ್ಕೆ ಆರೋಪಿಸಿದ್ದ ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹ್ಸೂದ್ ಮತ್ತು ಅಲ್‌ಖೈದಾಗಳು ಸಮರ್ಥವಾಗಿದ್ದವು ಎಂಬುದನ್ನು ಹೇಳಿದೆ.

ರಾವಲ್ಪಿಂಡಿ ನಗರದಲ್ಲಿ ರಾಜಕೀಯ ರ‌್ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯನ್ನು ಸಂಘಟಿಸಿದ್ದು ಮತ್ತು ಸಹಕಾರ ನೀಡಿದ್ದು ಯಾರೆಂಬ ಅಂತಿಮ ನಿರ್ಣಯವನ್ನು ವಿಶ್ವಸಂಸ್ಥೆಯ ಚಿಲಿ ರಾಯಭಾರಿ ಹೆರಾಲ್ಡೋ ಮುನೋಜ್ ನೇತೃತ್ವದ ಮೂವರು ಸದಸ್ಯರ ಸಮಿತಿ ನಿರ್ಧರಿಸಲು ವಿಫಲವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ