ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊಲೊಂಬಿಯಾ ಹೆಲಿಕಾಪ್ಟರ್‌ಗಳ ಮುಖಾಮುಖಿಗೆ ಆರು ಬಲಿ (Colombia helicopter collision | Bogota | Colombia | military)
Bookmark and Share Feedback Print
 
ಮಿಲಿಟರಿ ಹೆಲಿಕಾಪ್ಟರ್ ಮತ್ತು ನಾಗರಿಕ ಹೆಲಿಕಾಪ್ಟರ್ ಕೊಲೊಂಬಿಯಾ ರಾಜಧಾನಿ ಬೊಗೊಟೊದ ಆಕಾಶದಲ್ಲೇ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಜನರಲ್ ಸೇರಿದಂತೆ ಆರು ಮಂದಿ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಶಸ್ತ್ರಾಸ್ತ್ರ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಮಿಲಿಯರಿ ಹುವೇ ಏರ್‌ಕ್ರಾಫ್ಟ್ ಮತ್ತು ಬೆಲ್ 222 ಹೆಲಿಕಾಪ್ಟರ್ ನಡುವೆ ಚಪಾರಲ್ ನಗರದ ಮಧ್ಯದಲ್ಲಿ ಈ ಘಟನೆ ನಡೆದಿದೆ. ಬೆಲ್ 222 ಹೆಲಿಕಾಪ್ಟರ್ ಟೇಕ್-ಆಫ್ ಆಗುವ ಹೊತ್ತಿನಲ್ಲಿ ಆ ಅವಘಢ ಸಂಭವಿಸಿದೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಫೆರ್ನಾಂಡೋ ಜೋಯಾ ಡುಯಾರ್ಟೆ ಎಂಬ ಜನರಲ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಇಬ್ಬರು ಕರ್ನಲ್‌ಗಳು, ಒಬ್ಬ ಕ್ಯಾಪ್ಟನ್, ಒಬ್ಬ ನೌಕಾ ದಳದ ಲೆಫ್ಟಿನೆಂಟ್ ಮತ್ತು ಒಬ್ಬ ವೈಮಾನಿಕ ವಿಚಕ್ಷಣೆದಾರ ಬಲಿಯಾಗಿದ್ದಾರೆ.

ಈ ಪ್ರದೇಶದಲ್ಲಿ ಫಾರ್ಕ್ ಬಂಡುಕೋರರ ವಿರುದ್ಧ ಹೋರಾಡುತ್ತಿದ್ದ ತಂಡದ ನೇತೃತ್ವವನ್ನು ವಹಿಸಿಕೊಂಡಿದ್ದ ಜನರಲ್ ಜೋಯಾ, ಕಾರ್ಯಕ್ರಮವೊಂದರಲ್ಲಿ ವಾಪಸ್ ಬರುತ್ತಿದ್ದರು.

ಗಾಯಗೊಂಡಿರುವ ಐದು ಮಂದಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಯ ಹಿಂದಿನ ಕಾರಣಗಳ ಕುರಿತು ಸೇನೆಯು ತನಿಖೆ ನಡೆಸಲಿದೆ.

ಕೊಲಂಬಿಯಾ ಸ್ಪೇನ್‌ನಿಂದ ಸ್ವತಂತ್ರಗೊಂಡ ದೇಶವಾಗಿದ್ದು, ದಕ್ಷಿಣ ಅಮೆರಿಕಾ ಖಂಡದಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ