ವ್ಯಾಟಿಕನ್ ಸಿಟಿ, ಬುಧವಾರ, 21 ಏಪ್ರಿಲ್ 2010( 18:30 IST )
ಲೈಂಗಿಕ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮಕ್ಕೆ ಪೋಪ್ ಬೆನೆಡಿಕ್ಟ್ XVI ಮುಂದಾಗಿದ್ದಾರೆ. ಇತ್ತೀಚೆಷ್ಟೇ ಮಾಲ್ಟಾ ಪ್ರವಾಸ ಮಾಡಿದ್ದ ಅವರು, ದೌರ್ಜನ್ಯಕ್ಕೊಳಗಾದವರ ನೋವುಗಳನ್ನು ಹಂಚಿಕೊಳ್ಳುವುದಲ್ಲದೆ ಚರ್ಚ್ ಕಡೆಯಿಂದ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದೆ ಎಂದು ಬುಧವಾರ ಸೈಂಟ್ ಪೀಟರ್ಸ್‌ನಲ್ಲಿ ನಡೆದ ವಾರದ ಸಾರ್ವಜನಿಕ ಸಮಾರಂಭದಲ್ಲಿ ತಿಳಿಸಿದ್ದಾರೆ.
ತಮ್ಮ ಬಾಲ್ಯದಲ್ಲಿ ಪಾದ್ರಿಗಳಿಂದ ದೌರ್ಜನ್ಯಕ್ಕೊಳಗಾಗಿದ್ದೇವೆ ಎಂದು ಹೇಳಿದ ಎಂಟು ಮಾಲ್ಟ್ ದೇಶೀಯರನ್ನು ಭಾನುವಾರ ಭೇಟಿಯಾಗಿದ್ದ ಬೆನಿಡಿಕ್ಟ್ ಸಾಂತ್ವನ ಹೇಳಿದ್ದರು.
ಆರೋಪಕ್ಕೆ ಗುರಿಯಾಗಿರುವ ಪಾದ್ರಿಗಳನ್ನು ಕಾನೂನಿನ ವ್ಯಾಪ್ತಿಗೆ ತರಲು ವ್ಯಾಟಿಕನ್ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಯತ್ನಿಸಲಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಲಿದೆ ಎಂದು ಬಲಿಪಶುಗಳನ್ನು ಖಾಸಗಿಯಾಗಿ ಭೇಟಿಯಾದ ಸಂದರ್ಭದಲ್ಲಿ ಪೋಪ್ ಭರವಸೆ ನೀಡಿರುವುದಾಗಿ ವ್ಯಾಟಿಕನ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಇದು ಲೈಂಗಿಕ ದೌರ್ಜನ್ಯ ಸಂಬಂಧಿಸಿದಂತೆ ಬೆನಿಡಿಕ್ಟ್ ಹೊರಡಿಸಿದ ಮೊದಲ ಸಾರ್ವಜನಿಕ ಹೇಳಿಕೆಯಾಗಿದೆ.