ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆ ಹಿಂದೆ ನಮ್ಮ ಕೈವಾಡವಿಲ್ಲ: ಅಮೆರಿಕ ಕಿಡಿ (Benazir’s murder | Obama | Pakistan | ISI | Gul)
Bookmark and Share Feedback Print
 
ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಹತ್ಯೆಯ ಹಿಂದೆ ಅಮೆರಿಕದ ಕೈವಾಡ ಇದೆ ಎಂದು ಆರೋಪಿಸಿರುವ ಐಎಸ್ಐನ ಮಾಜಿ ವರಿಷ್ಠ ಹಮಿದ್ ಗುಲ್ ಅವರ ಹೇಳಿಕೆಯನ್ನು ಅಮೆರಿಕ ತೀವ್ರವಾಗಿ ಖಂಡಿಸಿ, ಇದೊಂದು ಅವಮಾನ ಮತ್ತು ಆಧಾರರಹಿತ ಆರೋಪ ಎಂದು ಪ್ರತಿಕ್ರಿಯೆ ನೀಡಿದೆ.

ಭುಟ್ಟೋ ಹತ್ಯೆ ಹಿಂದೆ ಅಮೆರಿಕ ಶಾಮೀಲಾಗಿದೆ ಎಂಬ ಗುಲ್ ಆರೋಪದ ಹಿಂದೆ ಅಮೆರಿಕ ವಿರೋಧಿ ನೀತಿ ಸಂಚಿದೆ. ನಿಜಕ್ಕೂ ಇದೊಂದು ಅವಮಾನದ ಸಂಗತಿ ಎಂದು ಸಾರ್ವಜನಿಕ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಪಿಜೆ ಕ್ರೌಲೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಬೇನಜಿರ್ ಹತ್ಯೆಯಲ್ಲಿ ಅಮೆರಿಕದ ಕೈವಾಡ ಇದೆ ಎಂಬ ಗುಲ್ ಹೇಳಿಕೆಯನ್ನು ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಸಾರಸಗಟಾಗಿ ತಳ್ಳಿ ಹಾಕಿದ ನಂತರ ಕ್ರೌಲೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಭುಟ್ಟೋ ಹತ್ಯೆ ಪ್ರಕರಣದ ಕುರಿತು ವಿಶ್ವಸಂಸ್ಥೆ ಸ್ವತಂತ್ರ ಆಯೋಗ ತನಿಖೆ ನಡೆಸುತ್ತಿದೆ. ಅಲ್ಲದೇ ಶೀಘ್ರದಲ್ಲೇ ಸತ್ಯಾಂಶ ಬಯಲಾಗಲಿದೆ ಎಂದು ಅವರು ವಿವರಿಸಿದರು.

ಗುಲ್ ಅಮೆರಿಕದ ಮೇಲೆ ಗೂಬೆ ಕೂರಿಸಿ ನೀಡಿರುವ ಹೇಳಿಕೆ ಆಧಾರರಹಿತವಾದದ್ದು ಮತ್ತು ಬೇಜವಾಬ್ದಾರಿತನದ್ದಾಗಿದೆ. ಆ ನಿಟ್ಟಿನಲ್ಲಿ ಇಂತಹ ಹೇಳಿಕೆಯನ್ನು ಪ್ರಕಟಿಸುವ ಮುನ್ನ ಪಾಕಿಸ್ತಾನದ ಮಾಧ್ಯಮಗಳು ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ