ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಚ್ಐವಿ ಪೀಡಿತರ ಚೀನಾ ಭೇಟಿ ನಿಷೇಧ ವಾಪಸ್ (China | HIV | AIDS | World expo | Bijing)
Bookmark and Share Feedback Print
 
ಚೀನಾದ ಶಾಂಘೈನಲ್ಲಿ ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ವರ್ಲ್ಡ್ ಎಕ್ಸ್‌ಫೋಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಎಚ್ಐವಿ ಪೀಡಿತರ ಚೀನಾ ಭೇಟಿಗೆ ಹೇರಿರುವ ನಿಷೇಧವನ್ನು ಚೀನಾ ಸರ್ಕಾರ ವಾಪಸ್ ಪಡೆದಿದೆ.

ಪ್ರಸ್ತುತ ಮಾನಸಿಕ ಅಸ್ವಸ್ಥರು, ಸೋಂಕು ಹಾಗೂ ಎಚ್ಐವಿ ಪೀಡಿತರಿಗೆ ಚೀನಾ ಭೇಟಿ ನೀಡಲು ನಿಷೇಧ ಹೇರಿತ್ತು. ಇದರಿಂದಾಗಿ ಎಚ್ಐವಿ ಪೀಡಿತರಿಗೆ ವರ್ಲ್ಡ್ ಎಕ್ಸ್‌ಫೋಗೆ ತೆರಳಲು ಅಡ್ಡಿ ಉಂಟಾಗಿತ್ತು.

ಆ ನಿಟ್ಟಿನಲ್ಲಿ ಆರು ತಿಂಗಳ ಕಾಲ ನಡೆಯುವ ವರ್ಲ್ಡ್ ಎಕ್ಸ್‌ಫೋಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎನ್ನುವ ಉದ್ದೇಶದಿಂದ ಚೀನಾ ಸಂಸತ್‌ನಲ್ಲಿ ಸೋಮವಾರ ವೀಸಾ ನೀತಿಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ