ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದೆಹಲಿ ಮಾರ್ಕೆಟ್‌ಗಳಿಗೆ ಉಗ್ರರ ದಾಳಿ ಸಾಧ್ಯತೆ: ಆಸ್ಟ್ರೇಲಿಯಾ (Australians warned of terror strikes | Australia | Commonwealth Games | New Delhi)
Bookmark and Share Feedback Print
 
ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನಡೆಯುವ ಹಿನ್ನೆಲೆಯಲ್ಲಿ ತನ್ನ ಪ್ರವಾಸಿ ಸಲಹಾ ಟಿಪ್ಪಣಿಯನ್ನು ಮಾರ್ಪಡಿಸುವ ಬದಲು ಆಸ್ಟ್ರೇಲಿಯಾ ತನ್ನ ದೇಶದ ಪ್ರಜೆಗಳಿಗೆ ಎಚ್ಚರಿಕೆ ರವಾನಿಸಿದೆ. ದೆಹಲಿ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚರಿಸುವುದರಿಂದ ದೂರ ಉಳಿಯಿರಿ ಎಂದು ಅದು ಸಲಹೆ ಮಾಡಿದೆ.

ಅಮೆರಿಕಾ ಮತ್ತು ಕೆನಡಾಗಳು ಎಚ್ಚರಿಕೆ ರವಾನಿಸಿದ ಬೆನ್ನಿಗೆ ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರ ಮತ್ತು ಉದ್ಯಮಗಳ ಇಲಾಖೆಯು ತನ್ನ ವೆಬ್‌ಸೈಟಿನಲ್ಲಿ ಪ್ರವಾಸಿಗರಿಗೆ ನೂತನ ಎಚ್ಚರಿಕೆಗಳನ್ನು ನೀಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೆಮಿಫೈನಲ್‌ಗೂ ಮೊದಲು ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗಳು ನಡೆದ ನಂತರ ಗೇಮ್ಸ್‌ಗಾಗಿ ಸಾವಿರಾರು ಪ್ರವಾಸಿಗರು ಮತ್ತು ಕ್ರೀಡಾಪಟುಗಳು ದೆಹಲಿಗೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿ ಈ ಎಚ್ಚರಿಕೆಯನ್ನು ರವಾನಿಸಲಾಗಿದೆ.

ವಿದೇಶೀಯರು ಹೆಚ್ಚಾಗಿ ಕಾಣಿಸಿಕೊಳ್ಳುವ ದೆಹಲಿಯ ಮಾರುಕಟ್ಟೆಗಳು ಮತ್ತು ಶಾಪಿಂಗ್ ಪ್ರದೇಶಗಳನ್ನು ಗುರುತು ಮಾಡಿರುವ ಆಸ್ಟ್ರೇಲಿಯಾ, ಮುಂಬರುವ ದಿನಗಳಲ್ಲಿ ಅಥವಾ ವಾರಗಳಲ್ಲಿ ಈ ಪ್ರದೇಶಗಳು ಭಯೋತ್ಪಾದಕರ ಗುರಿಗಳಾಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಚ್ಚರಿಕೆ ನೀಡಿವೆ.

ನವದೆಹಲಿಯ ಮಾರುಕಟ್ಟೆ ಪ್ರದೇಶಗಳಲ್ಲಿ ತಮ್ಮ ಪ್ರಯಾಣವನ್ನು ಕಡಿಮೆ ಮಾಡುವಂತೆ ನಾವು ಆಸ್ಟ್ರೇಲಿಯಾ ಪ್ರಜೆಗಳಿಗೆ ಬಲವಾದ ಸಲಹೆಗಳನ್ನು ನೀಡುತ್ತಿದ್ದೇವೆ ಎಂದು ಆಸ್ಟ್ರೇಲಿಯಾ ತಿಳಿಸಿದೆ.

ಆಸ್ಟ್ರೇಲಿಯಾ ಪ್ರಕಾರ ಭಾರತದ ರಾಜಧಾನಿಯ ಚಾಂದಿನಿ ಚೌಕ್, ಕನ್ನೌಟ್ ಪ್ಲೇಸ್, ಗ್ರೇಟರ್ ಕೈಲಾಸ್, ಕರೋಲ್ ಬಾಗ್, ಮೆಹ್ರೌಲಿ ಮತ್ತು ಸರೋಜಿನಿ ನಗರಗಳು ಭಯೋತ್ಪಾದಕರ ಸುಲಭ ದಾಳಿಗಳ ಗುರಿಗಳು.
ಸಂಬಂಧಿತ ಮಾಹಿತಿ ಹುಡುಕಿ