ಬಾಂಗ್ಲಾ: ಪ್ರಕರಣ ವಜಾ
ಢಾಕಾ: ಪ್ರಧಾನಿ ಶೇಖ್ ಹಸೀನಾ ವಿರುದ್ಧದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ಬಾಂಗ್ಲಾದೇಶ್ ಹೈಕೋರ್ಟ್ ಗುರುವಾರ ವಜಾಗೊಳಿಸಿ, ಇದೊಂದು ರಾಜಕೀಯ ಪ್ರೇರಿತ ಆರೋಪ ಎಂದು ನ್ಯಾಯಪೀಠ ತಿಳಿಸಿದೆ. ಹಸೀನಾ ವಿರುದ್ಧ ಮೇಘನಾಘಾಟ್ ಪವರ್ ಪ್ಲ್ಯಾಂಟ್ ಸ್ಥಾಪನೆ ವಿಚಾರದಲ್ಲಿ ಭಾರೀ ಪ್ರಮಾಣದಲ್ಲಿ ಲಂಚ ಸ್ವೀಕರಿಸಿದ್ದರೆಂದು ಆರೋಪ ಹೊರಿಸಲಾಗಿತ್ತು.