ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೊಸೆ ಸಾನಿಯಾಗೆ ಪಾಕಿಸ್ತಾನದಲ್ಲಿ ಪೂರ್ಣಕುಂಭ ಸ್ವಾಗತ (Sania Mirza | Shoaib Malik | Pakistan | India)
Bookmark and Share Feedback Print
 
ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಅವರನ್ನು ಇತ್ತೀಚೆಗಷ್ಟೇ ವಿವಾಹವಾಗಿರುವ ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಗಂಡನ ತವರಿನಲ್ಲಿ ಪೂರ್ಣಕುಂಭ ಸ್ವಾಗತ ದೊರೆತಿದೆ.

ಬಹುತೇಕ ಗಂಡಾಂತರಗಳನ್ನು ನೀಗಿಸಿಕೊಂಡು ನಿಖಾ ಮಾಡಿಕೊಂಡಿದ್ದ ಈ ಜೋಡಿ ನಿನ್ನೆಯಷ್ಟೇ ಮುಂಬೈಯಿಂದ ಕರಾಚಿಗೆ ವಿಮಾನದಲ್ಲಿ ಪ್ರಯಾಣಿಸಿತ್ತು. ನಂತರ ಅಲ್ಲಿಂದ ಇಸ್ಲಾಮಾಬಾದ್‌ಗೆ ತೆರಳಿದ್ದಾರೆ.
PR

ಈ ಸಂದರ್ಭದಲ್ಲಿ ಭಾರೀ ಭದ್ರತೆಯನ್ನು ಎರಡೂ ನಗರಗಳಲ್ಲಿ ಆಯೋಜಿಸಲಾಗಿತ್ತು. ಪಾಕಿಸ್ತಾನಿ ಜನತೆಯಂತೂ ಭಾರತೀಯ ಹೆಣ್ಣು ತಮ್ಮ ಸೊಸೆಯಾಗಿ ಬರುತ್ತಿರುವುದಕ್ಕೆ ಭಾರೀ ಸಂತಸ ವ್ಯಕ್ತಪಡಿಸಿದ್ದು, 'ಪಾಕಿಸ್ತಾನಿ ಸೊಸೆಗೆ ಸ್ವಾಗತ' ಎಂಬ ಭಿತ್ತಿಪತ್ರಗಳನ್ನು ಕೈಗಳಲ್ಲಿ ಹಿಡಿದುಕೊಂಡು ಸ್ವಾಗತ ಕೋರಿದರು.

ಇದರಲ್ಲಿ ಟಿವಿ ಚಾನೆಲ್‌ಗಳೂ ಹಿಂದೆ ಬೀಳಲಿಲ್ಲ. ಬಹುತೇಕ ಎಲ್ಲಾ ಚಾನೆಲ್‌ಗಳೂ 'ಸಾನಿಯಾ-ಶೋಯಿಬ್‌ಗೆ ಸ್ವಾಗತ' ಎಂಬ ಸಾಲನ್ನು ಪರದೆಯ ಒಂದು ಮೂಲೆಯಲ್ಲಿ ಸ್ಥಿರವಾಗಿಟ್ಟಿದ್ದವು.

ಅವರಿಬ್ಬರು ಮದುವೆಯಾಗಿರುವುದು ನನಗೆ ತೀವ್ರ ಸಂತಸವನ್ನುಂಟು ಮಾಡಿದೆ. ಈ ಮದುವೆಯಿಂದ ಎರಡೂ ದೇಶಗಳ ನಡುವಿನ ಸಂಬಂಧಗಳು ಗಟ್ಟಿಯಾಗಬಹುದು ಎಂಬುದು ನನ್ನ ಅಭಿಲಾಷೆ ಎಂದು ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ದಂಪತಿಯ ಆಗಮನಕ್ಕಾಗಿ ಕಾಯುತ್ತಿದ್ದ ಫಕೀರ್ ಖಾನ್ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

ಕೆಂಪು ಟ್ರಸರ್ ಮತ್ತು ಹಸಿರು ಪ್ಯಾಂಟನ್ನು ತೊಟ್ಟಿದ್ದ ಸಾನಿಯಾ ಸನ್‌ಗ್ಲಾಸ್ ಹಾಕಿಕೊಂಡು ಗಂಡನ ಕೈ ಹಿಡಿದುಕೊಂಡಿದ್ದರೆ, ಶೋಯಿಬ್ ನೀಲಿ ಜೀನ್ಸ್ ಮತ್ತು ಹಸಿರು ಟೀ-ಶರ್ಟ್ ಧರಿಸಿ ಮಿಂಚುತ್ತಿದ್ದರು.

ಪ್ರಧಾನಿ, ಅಧ್ಯಕ್ಷರನ್ನೂ ಮೀರಿಸಿದರು...
ಸಾಮಾನ್ಯವಾಗಿ ಪಾಕಿಸ್ತಾನದ ಪ್ರಧಾನ ಮಂತ್ರಿ, ಅಧ್ಯಕ್ಷರು ಅಥವಾ ವಿದೇಶಗಳ ಅತಿ ಗಣ್ಯರು ಆಗಮಿಸುವ ಸಂದರ್ಭಗಳಲ್ಲಿ ಮಾತ್ರ ಕರಾಚಿ ಮತ್ತು ಇಸ್ಲಾಮಾಬಾದ್‌ಗಳಲ್ಲಿನ ವಿಮಾನ ನಿಲ್ದಾಣ ಸಮೀಪದ ರಸ್ತೆಗಳನ್ನು ಬ್ಲಾಕ್ ಮಾಡಲಾಗುತ್ತದೆ. ಆದರೆ ನಿನ್ನೆ ಶೋಯಿಬ್ ಮತ್ತು ಸಾನಿಯಾ ಪ್ರಕರಣದಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವಂತೆ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಗಿಲಾನಿಯವರು ನಿನ್ನೆ ಹಲವು ಮಹತ್ತರ ಸರಕಾರಿ ನೂತನ ನಿಯಮಗಳನ್ನು ಪ್ರಕಟಿಸಿದ್ದರು. ಆದರೆ ಇವೆಲ್ಲಕ್ಕೂ ಎರಡನೇ ಪ್ರಾಶಸ್ತ್ಯ ನೀಡಿದ ಟಿವಿ ಚಾನೆಲ್‌ಗಳು ಭಾರತ-ಪಾಕ್ ಜೋಡಿಯ ಆಗಮನವನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡಿ, ನೇರ ಪ್ರಸಾರದ ಸುದ್ದಿಗಳನ್ನು ಭಿತ್ತರಿಸುತ್ತಿದ್ದವು.

ಪಾಕಿಸ್ತಾನದಲ್ಲಿ ಎರಡೆರಡು ಆರತಕ್ಷತೆ..
ಪ್ರಸಕ್ತ ಇಸ್ಲಾಮಾಬಾದ್‌ನಲ್ಲಿರುವ ಶೋಯಿಬ್ ಮತ್ತು ಸಾನಿಯಾ ಇಂದು ಸಂಜೆ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿಯವರನ್ನು ಭೇಟಿಯಾಗಿ ಔತಣ ಕೂಟದಲ್ಲಿ ಭಾಗವಹಿಸಲಿದ್ದಾರೆ. ನಂತರ ಭಾರತೀಯ ರಾಯಭಾರ ಕಚೇರಿಗೂ ಅವರು ಭೇಟಿ ನೀಡಲಿದ್ದಾರೆ.

ಬಳಿಕ ಅವರು ಸಾಯಿಲ್‌ಕೋಟ್‌ಗೆ ತೆರಳಲಿದ್ದಾರೆ. ಇಲ್ಲಿ ಶೋಯಿಬ್ ಗೆಳೆಯರು ಏಪ್ರಿಲ್ 25ರಂದು ಔತಣಕೂಟ ಏರ್ಪಡಿಸುತ್ತಿದ್ದಾರೆ. ನಂತರ ಜೋಡಿ ಲಾಹೋರ್‌ಗೆ ಪಯಣ ಬೆಳೆಸಲಿದೆ. ಏಪ್ರಿಲ್ 27ರಂದು ಲಾಹೋರ್‌ನ ಕ್ರಿಸ್ಟಲ್ ಹಾಲ್‌ನಲ್ಲಿ ಶೋಯಿಬ್ ಆಯೋಜಿಸಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಸಾವಿರದಷ್ಟು ಅತಿಥಿಗಳು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ