ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ತಾಲಿಬಾನ್‌ಗೆ ಅಣ್ವಸ್ತ್ರ ನೀಡುವ ಸಾಧ್ಯತೆ: ಅಮೆರಿಕಾ (Pakistan | India | Taliban | nuclear arms)
Bookmark and Share Feedback Print
 
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನತೆ ತೀವ್ರಗೊಂಡಲ್ಲಿ ಅಥವಾ ಯುದ್ಧವೇನಾದರೂ ಸಂಭವಿಸಿದಲ್ಲಿ ಆಗ ತಾಲಿಬಾನ್‌ಗೆ ಪಾಕ್ ತನ್ನಲ್ಲಿನ ಅಣ್ವಸ್ತ್ರಗಳನ್ನು ನೀಡುವ ಸಾಧ್ಯತೆಗಳಿವೆ ಎಂದು ಅಮೆರಿಕಾದ ಅಣ್ವಸ್ತ್ರ ಪ್ರಸರಣ ನಿಷೇಧ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಶ್ಮೀರ ವಿವಾದಕ್ಕೆ ಕುರಿತಂತೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಶಾಂತಿ ಭಂಗಗೊಂಡರೆ ಆಗ 'ನಾವು ಅಣ್ವಸ್ತ್ರಗಳನ್ನು ಬಳಸುವುದಿಲ್ಲ. ಆದರೆ ನಮ್ಮ ಬದಲಿಗೆ ಇಂತಹ ಅಸ್ತ್ರಗಳನ್ನು ತಾಲಿಬಾನ್ ಕೈಯಲ್ಲಿ ಕೊಡುತ್ತೇವೆ, ನಮ್ಮ ಕೆಟ್ಟ ಕೆಲಸಗಳನ್ನು ಅವರೇ ಮಾಡುತ್ತಾರೆ' ಎಂಬ ಭಾವನೆಯುಳ್ಳ ಆಡಳಿತದವರಿಂದಾಗಿ ಅಣ್ವಸ್ತ್ರ ಭಯೋತ್ಪಾದಕರಿಗೆ ಹಸ್ತಾಂತರಗೊಳ್ಳಬಹುದು ಎಂದು ಅಮೆರಿಕಾ ಶಾಸಕರ ಗುಂಪಿಗೆ ಬಾಬ್ ಗ್ರಹಾಂ ತಿಳಿಸಿದ್ದಾರೆ.

ಪಾಕಿಸ್ತಾನದ ಕೈಯಲ್ಲಿರುವ ಪರಮಾಣು ಅಸ್ತ್ರಗಳ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಅಮೆರಿಕಾ ಶಾಸಕರು ವ್ಯಕ್ತಪಡಿಸಿದ ಕಳವಳಕ್ಕೆ ಅಮೆರಿಕಾದ ಸಮೂಹ ನಾಶ ಅಸ್ತ್ರಗಳ ಪ್ರಸರಣ ಹಾಗೂ ಭಯೋತ್ಪಾದನಾ ತಡೆ ಆಯೋಗದ ಅಧ್ಯಕ್ಷರಾಗಿರುವ ಗ್ರಹಾಂ ಹೋಮ್ಲೆಂಡ್ ಸೆಕ್ಯುರಿಟಿ ಸಮಿತಿ ಕರೆದಿದ್ದ ಸಭೆಯಲ್ಲಿ ಉತ್ತರಿಸುತ್ತಿದ್ದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ವಿಫಲವಾಗಿದ್ದ ಕೆಲವು ವ್ಯವಸ್ಥೆಗಳನ್ನು ಸರಿಪಡಿಸಬಹುದಾದ ನಮ್ಮ ಶಿಫಾರಸುಗಳಲ್ಲೊಂದು ಕೆಲಸ ಮಾಡಬಹುದು ಎಂದು ನನ್ನ ಯೋಚನೆ. ಎರಡು ಅಣ್ವಸ್ತ್ರ ಬಣಗಳಾದ ಅಮೆರಿಕಾ ಮತ್ತು ಸೋವಿಯತ್ ಒಕ್ಕೂಟದ ಶೀತಲ ಸಮರದ ಸಂದರ್ಭದಲ್ಲಿ ಪರಸ್ಪರರ ಪರಮಾಣು ಶಕ್ತಿಯ ಬಗ್ಗೆ ತಿಳಿದಿದ್ದರೂ, ಯಾವುದೇ ಕಾರಣಕ್ಕೂ ಅದನ್ನು ಬಳಸುವ ಕೃತ್ಯಕ್ಕೆ ತಪ್ಪಿಯೂ ಯಾರೊಬ್ಬರೂ ಮುಂದಾಗಿರಲಿಲ್ಲ. ಹಾಗಾಗಿ ಯಾವುದೇ ಹಂತದಲ್ಲೂ ತಾಳ್ಮೆಗೆಡದಂತಹ ವ್ಯವಸ್ಥೆಯನ್ನು ಈ ಎರಡೂ ದೇಶಗಳ ವಲಯಗಳಲ್ಲಿ ಮೂಡಿಸಬೇಕೆಂಬುದು ನಮ್ಮ ಯತ್ನ ಎಂದು ಗ್ರಹಾಂ ವಿವರಣೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯಾರೂ ಇಲ್ಲ. ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಖಾಲಿ ಜಾಗದಲ್ಲಿ ಅಮೆರಿಕಾ ಮತ್ತು ರಷ್ಯಾಗಳು ಒಟ್ಟಾಗಿ ಕೆಲಸ ಮಾಡಬಹುದು ಎಂಬುದು ನನ್ನ ಭಾವನೆ ಎಂದು ಅವರು ಅಭಿಪ್ರಾಯಪಟ್ಟರು.

ಕೆಲವೊಂದು ಮಹತ್ತರ ವಿಫಲತೆಗಳನ್ನು ತಪ್ಪಿಸುವ ಮಾರ್ಪಾಡುಗಳ ಬೆಳವಣಿಗೆಯನ್ನು ಭಾರತ ಮತ್ತು ಚೀನಾಗಳು ಈಗಾಗಲೇ ಆರಂಭಿಸಿರುವುದು ನನಗೆ ಸಂತಸ ತಂದಿದೆ. ಇದೇ ರೀತಿಯ ಬದಲಾವಣೆಗಳು ನಿಜವಾದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನಗಳ ನಡುವೆಯೂ ನಡೆಯಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ