ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬೆಲ್ಜಿಯಂ ಬಿಷಪ್ ರಾಜೀನಾಮೆ; ಇಂಗ್ಲೆಂಡ್ ಚರ್ಚುಗಳಿಂದ ವಿಷಾದ (bishop | sex abuse | Roman Catholic Church | Belgium)
Bookmark and Share Feedback Print
 
ಬೆಲ್ಜಿಯಂನ ಫ್ಲೆಮಿಶ್ ಪ್ರಾಂತ್ಯದ ಬ್ರೂಗ್ಸ್ ಬಿಷಪ್ ಕೆಲವು ವರ್ಷಗಳ ಹಿಂದೆ ಬಾಲಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಒಪ್ಪಿಕೊಂಡಿದ್ದು, ರಾಜೀನಾಮೆ ಸಲ್ಲಿಸಿದ್ದಾರೆ ಎಂದು ರೋಮನ್ ಕ್ಯಾಥೊಲಿಕ್ ಚರ್ಚ್ ಶುಕ್ರವಾರ ಪ್ರಕಟಿಸಿದೆ.

ನಾನು ಬಿಷಪ್ ಆಗುವ ಮೊದಲು ಮತ್ತು ನಂತರದ ಕೆಲವು ಸಮಯದಲ್ಲಿ ನನಗೆ ಆಪ್ತನಾಗಿದ್ದ ಬಾಲಕನೊಬ್ಬನಿಗೆ ಲೈಂಗಿಕ ಕಿರುರುಳ ನೀಡಿದ್ದೆ ಎಂದು ಬಿಷಪ್ ರೋಜರ್ ವಾಂಗೆಲ್ವೇಯವರು ಬರೆದಿರುವ ಪತ್ರವನ್ನು ಚರ್ಚ್ ಅಧಿಕಾರಿಗಳು ಪತ್ರಕರ್ತರಿಗೆ ಓದಿ ಹೇಳಿದ್ದಾರೆ.

ಬಿಷಪ್ ಅವರಿಂದ ಕಿರುಕುಳಕ್ಕೊಳಗಾದ ಬಲಿಪಶು ಈಗಲೂ ಮಾನಸಿಕವಾಗಿ ಭೀತನಾಗಿದ್ದಾನೆ ಎಂದೂ ಪತ್ರದಲ್ಲಿ ವಿವರಣೆ ನೀಡಲಾಗಿದೆ.

ಇಂಗ್ಲೆಂಡ್ ಪಾದ್ರಿಗಳಿಂದ ಕ್ಷಮೆಯಾಚನೆ...
ವಿಶ್ವದಾದ್ಯಂತದ ಚರ್ಚುಗಳಲ್ಲಿ ಪಾದ್ರಿಗಳಿಂದ ಭಾರೀ ಪ್ರಮಾಣದಲ್ಲಿ ಮಕ್ಕಳಿಗೆ ಕಿರುಕುಳ ನೀಡಿರುವ ಪ್ರಕರಣಗಳು ನಡೆದಿರುವುದನ್ನು ಭಯಾನಕ ಅಪರಾಧ ಕೃತ್ಯಗಳು ಎಂದು ಬಣ್ಣಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ಯಾಥೊಲಿಕ್ ಬಿಷಪ್‌ಗಳು, ಕ್ಷಮೆ ಯಾಚಿಸಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ಯಾಥೊಲಿಕ್ ಚರ್ಚುಗಳಲ್ಲಿ ಇಂತಹ ಹಲವು ಹಗರಗಣಗಳು ನಡೆದಿದ್ದವು. ಆದರೆ ಅವು ದಶಕದ ಹಿಂದೆಯೇ ಬಹಿರಂಗವಾದ ನಂತರ ಚರ್ಚುಗಳಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿತ್ತು. ಆದರೆ ಪ್ರಸಕ್ತ ಭಾರೀ ವಿವಾದಕ್ಕೀಡಾಗುತ್ತಿರುವ ಮಕ್ಕಳ ಕಿರುಕುಳ ಹಗರಣಗಳನ್ನು ನೇರವಾಗಿ ಪರಿಹರಿಸಬೇಕೆಂದು ಬಿಷಪ್‌ಗಳು ಹೇಳಿದ್ದಾರೆ.

ಕ್ಯಾಥೊಲಿಕ್‌‌ಗಳು ಒಂದು ಜಾಗತಿಕ ಮಹಾ ಸಂಸ್ಥೆಯ ಸದಸ್ಯತ್ವ ಹೊಂದಿದ್ದು, ಇಂತಹ ಭಯಾನಕ ಅಪರಾಧಿ ಕೃತ್ಯಗಳು ಮತ್ತು ಕೆಲವು ಚರ್ಚ್ ಮುಖಂಡರು ಅದನ್ನು ಒಪ್ಪಿಕೊಳ್ಳದೇ ಇರುವುದು ನಮಗೆ ತೀವ್ರ ದುಃಖವನ್ನು ತಂದಿದೆ. ಪಾದ್ರಿಗಳಿಂದ ಯಾವುದೇ ರೀತಿಯ ತೊಂದರೆಗಳನ್ನು ಅನುಭವಿಸಿದ ಬಲಿಪಶುಗಳಲ್ಲಿ ನಾವು ದೀನರಾಗಿ ಕ್ಷಮೆ ಯಾಚಿಸುತ್ತಿದ್ದೇವೆ ಎಂದು ಬಿಷಪ್‌ಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ