ದೇಶದೊಳಗೆ ಸಿಖ್ ಉಗ್ರಗಾಮಿ (ಖಾಲಿಸ್ತಾನ್ ಚಳವಳಿ) ಸಂಘಟನೆಯ ಚಟುವಟಿಕೆ ತಲೆಎತ್ತಲು ಬಿಡಲ್ಲ ಎಂದು ಶಪಥಗೈದಿರುವ ಕೆನಡಾ, ಯಾವುದೇ ಕಾರಣಕ್ಕೂ ದೇಶದ ನೆಲದಲ್ಲಿ ಪ್ರತ್ಯೇಕವಾದಿಗಳ ಅಟ್ಟಹಾಸ ನಡೆಸಲು ಅವಕಾಶ ನೀಡುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಸಿಖ್ ಉಗ್ರಗಾಮಿ ಸಂಘಟನೆ ಕಾನೂನು ಬಾಹಿರ ಚಟುವಟಿಕೆ ನಡೆಸುವುದನ್ನು ಕೆನಡಾ ಸರ್ಕಾರ ಸಹಿಸುವುದಿಲ್ಲ ಎಂದು ಕೆನಡಾ ವಿದೇಶಾಂಗ ವ್ಯವಹಾರಗಳ ಸಚಿವ ದೀಪಕ್ ಒಬೇರಾಯ್ ಪಿಟಿಐಗೆ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿರುವ ಉಗ್ರರಿಗೆ ಕೆನಡಾದಲ್ಲಿರುವ ಸಿಖ್‌ರು ಬೆಂಬಲ ನೀಡುತ್ತಿದ್ದಾರೆಂಬ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಭಿಪ್ರಾಯ ಕುರಿತಂತೆ ಒಬೇರಾಯ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಸಿಖ್ ಭಯೋತ್ಪಾದನಾ ಚಟುವಟಿಕೆ ಇದ್ದಿರುವುದಾಗಿ ಲಿಬರಲ್ ಕ್ಯಾಬಿನೆಟ್‌ನ ಮಾಜಿ ಸಚಿವ ಹಾಗೂ ಒಂದು ಬಾರಿ ಬ್ರಿಟಿಷ್ ಕೊಲುಂಬಿಯಾದ ಪ್ರಧಾನಿಯಾಗಿದ್ದ ಉಜ್ಜಾಲ್ ಡೋಸಾನ್‌ಜಾ ತಿಳಿಸಿದ್ದಾರೆ.