ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾತುಕತೆ ವಿಳಂಬವಾದ್ರೆ ಉಗ್ರರಿಗೇ ಲಾಭ: ಭಾರತಕ್ಕೆ ಜರ್ದಾರಿ (Pakistan | Asif Ali Zardari | Islamabad | India | Kashmir)
Bookmark and Share Feedback Print
 
ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಮಾತುಕತೆಗೆ ಭಾರತ ಶೀಘ್ರವೇ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿ ಮಾತುಕತೆಗೆ ಮುಂದಾಗುವುದು ಉತ್ತಮ ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಮಾತುಕತೆ ಪ್ರಕ್ರಿಯೆ ವಿಳಂಬವಾಗುತ್ತ ಹೋದಲ್ಲಿ ಅದರ ಹೆಚ್ಚಿನ ಲಾಭ ಉಗ್ರರ ಪಾಲಾಗಲಿದೆ ಎಂದು ಎಚ್ಚರಿಸಿದ್ದಾರೆ.

ಆ ನಿಟ್ಟಿನಲ್ಲಿ ಕಾಶ್ಮೀರ ವಿವಾದ ಸೇರಿದಂತೆ ಈವರೆಗಿನ ಎಲ್ಲಾ ವಿವಾದಗಳನ್ನು ಬಗೆಹರಿಸಿಕೊಳ್ಳುವ ಇಚ್ಛೆಯನ್ನು ಪಾಕಿಸ್ತಾನ ಹೊಂದಿರುವುದಾಗಿಯೂ ಅವರು ತಿಳಿಸಿದ್ದಾರೆ. ಹಾಗಾಗಿ ಮಾತುಕತೆ ಪ್ರಕ್ರಿಯೆ ಮುಂದೂಡದೆ ಎರಡೂ ದೇಶಗಳು ಶೀಘ್ರವೇ ಚರ್ಚೆ ನಡೆಸುವುದು ಉತ್ತಮ ಎಂದಿದ್ದಾರೆ.

ಆ ನೆಲೆಯಲ್ಲಿ ಭಾರತ ಸರ್ಕಾರ ಪಾಕಿಸ್ತಾನದ ಶಾಂತಿ ಮಾತುಕತೆ ಪ್ರಕ್ರಿಯೆಯ ಆಹ್ವಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತದೆ ಎಂಬ ವಿಶ್ವಾಸ ಹೊಂದಿರುವುದಾಗಿ ಜರ್ದಾರಿ ತಿಳಿಸಿದ್ದಾರೆ ಎಂದು ವರದಿಯೊಂದು ಹೇಳಿದೆ.

ಭಾರತ ಮತ್ತು ಪಾಕಿಸ್ತಾನ ಶೀಘ್ರವೇ ಮಾತುಕತೆ ನಡೆಸಿ ವಿವಾದಗಳನ್ನು ಬಗೆಹರಿಸಿಕೊಂಡಲ್ಲಿ ಮಾತ್ರ ಭಯೋತ್ಪಾದನೆ ಮಟ್ಟಹಾಕಲು ಸಾಧ್ಯವಾಗಲಿದೆ. ಇಲ್ಲದಿದ್ದಲ್ಲಿ ಮಾತುಕತೆ ವಿಳಂಬದ ಅವಕಾಶವನ್ನು ಉಗ್ರರೇ ಹೆಚ್ಚಾಗಿ ಪಡೆಯಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ