ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊನೆಗೂ 80ರ ಗಂಡನಿಗೆ 12ರ ಪತ್ನಿಯಿಂದ ವಿಚ್ಛೇದನ! (Saudi Arabia | Dubai | Prophet Muhammad | child marriage)
Bookmark and Share Feedback Print
 
ಹೌದು, ಕೊನೆಗೂ ತನ್ನ ತಾತನ ಪ್ರಾಯದ 80ರ ಹರೆಯದ ಗಂಡನಿಗೆ ಸೌದಿ ಅರೇಬಿಯಾದ 12ರ ಬಾಲಕಿ ವಿಚ್ಚೇದನ ನೀಡುವಲ್ಲಿ ಯಶಸ್ವಿಯಾಗಿದ್ದಾಳೆ. ಆ ಮೂಲಕ ಬಾಲ್ಯ ವಿವಾಹದ ವಿರುದ್ಧ ಸೌದಿ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ.

ಮೂಲಗಳ ಪ್ರಕಾರ, ತಾಯಿಯ ವಿರೋಧದ ನಡುವೆಯೂ 12ರ ಬಾಲಕಿಯನ್ನು ತಂದೆಯ ಸೋದರ ಬಾಂಧವ್ಯದ ವ್ಯಕ್ತಿಯೊಬ್ಬರ ಜೊತೆ ವಿವಾಹ ಮಾಡಲಾಗಿತ್ತು. ಅಲ್ಲದೆ ವರದಕ್ಷಿಣೆಯಾಗಿ ಸುಮಾರು 10 ಲಕ್ಷ ರೂಪಾಯಿಗಳನ್ನು ವರನ ಕಡೆಯವರು ಪಡೆದಿದ್ದರು.

ಇದರ ವಿರುದ್ಧ ಸೌದಿ ಸರಕಾರದ ಕಾನೂನಿನ ನೆರವು ಪಡೆದ ಬಾಲಕಿಯು ರಿಯಾದ್ ಸಮೀಪದ ಬುರೈದಾ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ಹಂತದಲ್ಲಿ ಪ್ರಕರಣವು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿತ್ತು. ತೀವ್ರ ವಿವಾದ ಉಂಟಾದ ಹಿನ್ನೆಲೆಯಲ್ಲಿ ಅಲ್ಲಿನ ಮಾನವ ಹಕ್ಕುಗಳ ಆಯೋಗವು ಕೋರ್ಟ್‌ನಲ್ಲಿ ಬಾಲಕಿಯ ಪರ ವಾದ ಮಂಡಿಸಲು ವಕೀಲರೊಬ್ಬರನ್ನು ನೇಮಿಸಿತ್ತು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇಂತಹ ಪ್ರಕರಣಗಳು ಭವಿಷ್ಯ ಮರುಕಳಿಸಬಾರದು ಎಂಬುದು ನಮ್ಮ ಗುರಿಯಾಗಿದೆ ಎಂದು ಬಾಲಕಿಯ ಪರ ಆಯೋಗದಿಂದ ನೇಮಿಸಲ್ಪಟ್ಟ ವಕೀಲ ಅಲಾನೌದ್ ಅಲ್ ಹಿಜಲಾನ್ ತಿಳಿಸಿದ್ದಾರೆ. ಈ ಪ್ರಕರಣದ ಮೂಲಕ ಸಾರ್ವಜನಿಕರ ಅಭಿಪ್ರಾಯವು ಬದಲಾಗಿದೆ ಎಂಬುದು ನಮ್ಮ ಅನಿಸಿಕೆ. ಬಾಲ್ಯ ವಿವಾಹವನ್ನು ತಡೆಗಟ್ಟಲು ಮದುವೆಯ ಕನಿಷ್ಠ ವಯಸ್ಸಿನ ಕುರಿತು ನಮಗೆ ಸಾರ್ವಜನಿಕ ಬೆಂಬಲ ಅಗತ್ಯವಾಗಿದೆ ಎಂದವರು ಹೇಳಿದರು.

ಪ್ರವಾದಿ ಮಹಮ್ಮದ್ ಒಂಬತ್ತರ ಹರೆಯದ ಬಾಲಕಿಯನ್ನು ವಿವಾಹವಾಗಿದ್ದನ್ನು ಉದಾಹರಿಸುವ ಮೂಲಕ ಅಲ್ಲಿನ ಕೆಲವು ನ್ಯಾಯಾಧೀಶರು ಮತ್ತು ಧಾರ್ಮಿಕ ಮುಖಂಡರು ಬಾಲ್ಯವಿವಾಹವನ್ನು ಸಮರ್ಥಿಸಿಕೊಂಡಿದ್ದರಿಂದ ಪ್ರಕರಣವು ಸೌದಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಆದರೆ 14 ಶತಮಾನಗಳ ಹಿಂದಿನ ಪ್ರವಾದಿಯವರ ವಿವಾಹವನ್ನು ಇಂದಿನ ಪರಿಸ್ಥಿತಿಗೆ ಸಮರ್ಥಿಸಿಕೊಳ್ಳಬಾರದು ಎಂದು ಇದೇ ವರ್ಷದ ಜನವರಿ ತಿಂಗಳಲ್ಲಿ ಹೇಳುವ ಮೂಲಕ ಸೌದಿಯ ಹಿರಿಯ ಧಾರ್ಮಿಕ ಮುಖಂಡ ಶೇಖ್ ಅಬ್ದುಲ್ಲಾ ಅಲ್ ಬಾಲಕಿಯ ರಕ್ಷಣೆಗೆ ಬಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ