ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಕೈದಿಗಳ ವಾಹನದ ಮೇಲೆ ಭಯೋತ್ಪಾದಕರ ದಾಳಿ (Bomb attack | Pakistan | Taliban | Terrorist)
Bookmark and Share Feedback Print
 
ವಾಯುವ್ಯ ಪಾಕಿಸ್ತಾನದಲ್ಲಿ ಕೈದಿಗಳನ್ನು ಗುರಿಯಾಗಿರಿಸಿಕೊಂಡು ಅವರನ್ನು ಸಾಗಿಸುತ್ತಿದ್ದ ವ್ಯಾನ್ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 10 ಮಂದಿ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಖೈಬರ್ ಪಾಖ್ಟೂಂಖ್ವಾ ಪ್ರಾಂತ್ಯದ ಡಿರ್ ಜಿಲ್ಲೆಯ ಪ್ರಮುಖ ನಗರ ತಿಮರಾಗರಾ ಎಂಬಲ್ಲಿನ ಜೈಲಿನ ಸಮೀಪ ಈ ವ್ಯಾನ್ ಮೇಲೆ ದಾಳಿ ನಡೆಸಲಾಗಿದೆ.

ರಿಮೋಟ್ ಕಂಟ್ರೋಲ್ ಬಳಸಿ ಈ ಸ್ಫೋಟವನ್ನು ನಡೆಸಲಾಗಿದೆ ಎಂದು ಪಾಕಿಸ್ತಾನದ ಟಿವಿ ಚಾನೆಲ್‌ಗಳು ವರದಿ ಮಾಡಿವೆ.

ಗಾಯಗೊಂಡವರನ್ನು ತಿಮರಾಗರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಖೈಬರ್ ಪ್ರಾಂತ್ಯದ ರಾಜಧಾನಿಯಾಗಿರುವ ಪೇಶಾವರಕ್ಕೆ ಕೊಂಡೊಯ್ಯಲಾಗಿದೆ.

ಸ್ಫೋಟ ನಡೆದ ತಕ್ಷಣವೇ ಪೊಲೀಸರು ಪ್ರತಿ ದಾಳಿಯ ಅಂಗವಾಗಿ ಭಯೋತ್ಪಾದಕರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಇದುವರೆಗೂ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ದಿರ್ ಜಿಲ್ಲೆಯಲ್ಲಿ ಈ ಹಿಂದೆ ರಾಜಕೀಯ ವ್ಯಕ್ತಿಗಳು ಮತ್ತು ಭದ್ರತಾ ಪಡೆಗಳ ಮೇಲೆ ತಾಲಿಬಾನ್ ಭಯೋತ್ಪಾದಕರು ದಾಳಿ ಮಾಡಿದ ಹಲವು ಉದಾಹರಣೆಗಳಿವೆ. ಈ ಪ್ರಾಂತ್ಯದಲ್ಲಿ ಉಗ್ರರು ಪ್ರಬಲ ನೆಲೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ