ಲಾಸ್ ಏಂಜಲೀಸ್, ಶನಿವಾರ, 24 ಏಪ್ರಿಲ್ 2010( 19:46 IST )
ಪ್ರಯಾಣಿಕನೊಬ್ಬ ಬಾಟಲಿಯ ನೀರನ್ನು ಎರಚಿ, ವಿಮಾನದ ಕ್ಯಾಬಿನ್ ಡೋರ್ ಅನ್ನು ತೆರೆಯಲು ಯತ್ನಿಸಿ ವಿಮಾನವನ್ನು ಧ್ವಂಸಗೊಳಿಸುತ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ಅಮೆರಿಕದ ವಿಮಾನವೊಂದರಲ್ಲಿ ಶುಕ್ರವಾರ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನೀರಿನ ಬಾಟಲಿ ಹಿಡಿದು ವಿಮಾನ ಧ್ವಂಸಗೊಳಿಸುವುದಾಗಿ ಬೆದರಿಕೆಯೊಡ್ಡಿದ ಸ್ಟ್ಯಾನ್ಲಿ ಡ್ವಾನೆ ಶಿಫ್ಪೆಲ್ಡ್ (46)ಎಂಬಾತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಲಾಸ್ ಏಂಜಲೀಸ್‌ನಿಂದ ಟಾಂಪಾ, ಫ್ಲೋರಿಡಾಕ್ಕೆ ತೆರಳುತ್ತಿದ್ದ ಅಮೆರಿಕದ ಡೆಲ್ಟಾ ವಿಮಾನದಲ್ಲಿ ಈ ಘಟನೆ ನಡೆದಿರುವುದಾಗಿ ಫೆಡರಲ್ ಬ್ಯೂರೋ ಇನ್ವೆಸ್ಟಿಗೇಶನ್ ಅಧಿಕಾರಿಗಳು ತಿಳಿಸಿದ್ದಾರೆ.