ನೈಟ್ ಕ್ಲಬ್‌ವೊಂದರಲ್ಲಿ ಗೆಳೆಯರ ಜೊತೆ ಕಳೆಯುತ್ತಿದ್ದ ವೇಳೆ ಹುಡುಗಿಯರ ಗುಂಪೊಂದು ಬೆನ್ನು ಬಿದ್ದ ಹಿನ್ನೆಲೆಯಲ್ಲಿ ಪಾರಾಗಲು ಓಟಕಿತ್ತ ಬ್ರಿಟೀಷ್ ಯುವರಾಜ ಪ್ರಿನ್ಸ್ ಹ್ಯಾರಿ ಶೌಚಾಲಯದಲ್ಲಿ ಅಡಗಿಕೊಂಡ ಪ್ರಸಂಗ ವರದಿಯಾಗಿದೆ.
ಆದರೆ ಕಿರುಚುತ್ತಿದ್ದ ಹುಡುಗಿಯರು ಪುರುಷರ ಶೌಚಾಲಯವೆಂಬುದನ್ನೂ ಲೆಕ್ಕಿಸದೆ ನುಗ್ಗಿ, ಗೋಡೆಯ ಮೇಲೆ ಹತ್ತಿ ತಮ್ಮ ಮೊಬೈಲ್ ಫೋನ್‌ಗಳಿಂದ ಯುವರಾಜನ ಫೋಟೋಗಳನ್ನು ತೆಗೆದಿದ್ದಾರೆ ಎಂದು 'ನ್ಯೂಸ್ ಆಫ್ ದಿ ವರ್ಲ್ಡ್' ವರದಿ ಮಾಡಿದೆ.
ಇದು ಅಪಾಯಕಾರಿಯಾಗಿ ಪರಿಣಮಿಸಿತ್ತು. ಹುಡುಗಿಯರ ಗುಂಪಿನಲ್ಲಿದ್ದ ಒಬ್ಬಾಕೆ ಹ್ಯಾರಿಯನ್ನು ಗುರುತಿಸಿದ ನಂತರ ಎಲ್ಲರೂ ಹುಚ್ಚು ಹಿಡಿದವರಂತೆ ಆತನ ಜೊತೆ ಫೋಟೋ ಕ್ಲಿಕ್ಕಿಸಲು ಮುಂದಾದರು. ಆದರೆ ಈ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಹ್ಯಾರಿ ಪುರುಷರ ಶೌಚಾಲಯಕ್ಕೆ ಓಡಿ ಹೋಗಬೇಕಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.
ಆದರೂ ಅಲ್ಲಿಗೂ ಈ ಯುವತಿಯರು ದಾಳಿಯಿಟ್ಟಿದ್ದರು. ಇದರಿಂದಾಗಿ ಯುವರಾಜನಿಗೆ ತಪ್ಪಿಸಿಕೊಳ್ಳಲು ಅವಕಾಶವೇ ಕೊಡಲಿಲ್ಲ ಎಂದವರು ಹೇಳಿದ್ದಾರೆ.
ಸಫ್ಲಾಕ್‌ನ ನ್ಯೂ ಮಾರ್ಕೆಟ್ ಸಮೀಪ ಡಿ ನಿರೋಸ್‌ನಲ್ಲಿ ಆರ್ಎಎಫ್ ವ್ಯಾಟಿಶಾಮ್ ಸಮೀಪ ಹೆಲಿಕಾಪ್ಟರ್ ಚಾಲನಾ ತರಬೇತಿ ಪಡೆಯುತ್ತಿರುವ ಹ್ಯಾರಿ ಗೆಳೆಯರ ಜತೆ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಘಟನೆ ನಡೆದಿದೆ.