ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈಯಲ್ಲಿ 1.21 ಕೋಟಿ ರೂ. ಗೆದ್ದ ಭಾರತೀಯ ಇಂಜಿನಿಯರ್
(Indian engineer | Dubai lucky draw | Mohammed Azhar Ali | Kunooz account)
ದುಬೈಯ ಕಟ್ಟಡ ನಿರ್ಮಾಣ ಸಂಸ್ಥೆಯೊಂದರಲ್ಲಿ ಹಿರಿಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಭಾರತೀಯ ವ್ಯಕ್ತಿಯೊಬ್ಬರು ಬ್ಯಾಂಕ್ ಒಂದರ ಅದೃಷ್ಟ ಡ್ರಾ ವಿಜೇತರೆನಿಸಿಕೊಂಡಿದ್ದು, ಒಂದು ಮಿಲಿಯನ್ ದಿರ್ಹಾಮ್ ಬಹುಮಾನ ಗೆದ್ದುಕೊಂಡಿದ್ದಾರೆ.
ಕಳೆದ 16 ವರ್ಷಗಳಿಂದ ದುಬೈಯಲ್ಲಿ ನೆಲೆಸಿರುವ ಮೊಹಮ್ಮದ್ ಅಜರ್ ಆಲಿ ಎಂಬವರೇ ಈ ಭಾರೀ ಬಹುಮಾನವನ್ನು ಗೆದ್ದವರು. ಗೆದ್ದಿರುವ ಒಂದು ಮಿಲಿಯನ್ ದಿರ್ಹಾಮ್ (ಸುಮಾರು 1.21 ಕೋಟಿ ರೂಪಾಯಿ) ಹಣವನ್ನು ಕುಟುಂಬದ ಭವಿಷ್ಯಕ್ಕಾಗಿ ಮೀಸಲಿಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ನನಗೆ ನಾಲ್ಕು ಮಕ್ಕಳಿದ್ದಾರೆ. ಖಂಡಿತಾ ಅವರ ಉತ್ತಮ ಭವಿಷ್ಯಕ್ಕಾಗಿ ಅಗತ್ಯವಿರುವ ಶಿಕ್ಷಣವನ್ನು ನಾನು ಈ ಮೂಲಕ ಒದಗಿಸುತ್ತೇನೆ. ಸಮಾಜ ಸೇವೆಗೂ ಇದರಿಂದ ಅಲ್ಪ ಪ್ರಮಾಣದಲ್ಲಿ ಬಳಸಲು ನಾನು ಆಸಕ್ತನಾಗಿದ್ದೇನೆ ಎಂದು ಮೊಹಮ್ಮದ್ ತಿಳಿಸಿದ್ದಾರೆ.
ದುಬೈ ಬ್ಯಾಂಕ್‌ನ ಕುನೂಜ್ ಖಾತೆಯಲ್ಲಿ ಹೂಡಿಕೆ ಡ್ರಾದ ಈ ತಿಂಗಳ ಅದೃಷ್ಟಶಾಲಿಯಾಗಿ ಮೊಹಮ್ಮದ್ ವಿಜೇತರಾಗಿದ್ದು, ಅವರಿಗೆ ದುಬೈ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ತಾರಿಖ್ ಆಲ್ ಫಾರ್ಸಿ ಬಹುಮಾನದ ಮೊತ್ತವನ್ನು ಹೊಂದಿದ ಚೆಕ್ ಹಸ್ತಾಂತರಿಸಿದ್ದಾರೆ.
ಮೊಹಮ್ಮದ್ ಈ ಬ್ಯಾಂಕಿನ ಕುನೂಜ್ ಖಾತೆಗೆ ಕಳೆದ ವರ್ಷದ ಜುಲೈಯಲ್ಲಿ ಸಹಿ ಮಾಡಿದ್ದರು.