ಸರ್ಕಾರದ ಹಣ ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ಪನಾಮಾದ ಮಾಜಿ ಸರ್ವಾಧಿಕಾರಿ ಮ್ಯಾನುಯೆಲ್ ನೋರಿಯೆಗಾನನ್ನು ಅಮೆರಿಕ ಸೋಮವಾರ ಫ್ರಾನ್ಸ್ ವಶಕ್ಕೊಪ್ಪಿಸಿದೆ.
ಮಾಜಿ ಸರ್ವಾಧಿಕಾರಿಯನ್ನು ಮಿಯಾಮಿಯ ಹೊರಭಾಗದಲ್ಲಿ ಬಂಧಿಸಲಾಗಿತ್ತು ಎಂದು ಜಸ್ಟೀಸ್ ಡಿಪಾರ್ಟ್‌ಮೆಂಟ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪ್ರಕರಣದ ಕುರಿತು ಮಾಜಿ ಸರ್ವಾಧಿಕಾರಿಗೆ ಹೊರಗೆ ಮಾತನಾಡುವ ಅವಕಾಶ ಇಲ್ಲ ಎಂಬುದಾಗಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಇದೀಗ ಮಾಜಿ ಸರ್ವಾಧಿಕಾರಿ ಮ್ಯಾನುಯೆಲ್ ಮಂಗಳವಾರ ಬೆಳಿಗ್ಗೆ ಪ್ಯಾರಿಸ್‌ನ ಚಾರ್ಲ್ಸ್ ಡೇ ಗುಲ್ಲೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವುದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮ್ಯಾನುಯೆಲ್‌ನನ್ನು ಫ್ರಾನ್ಸ್ ವಶಕ್ಕೊಪ್ಪಿಸಿರುವುದಾಗಿ ಆತನ ವಕೀಲರು ಸ್ಪಷ್ಟಪಡಿಸಿದ್ದಾರೆ.