ಗನ್ ಹೊಂದಿದ್ದ ವ್ಯಕ್ತಿಯೊಬ್ಬ ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಅವರಿದ್ದ ಸುದ್ದಿ ತಿಳಿದ ಅವರನ್ನು ಭೇಟಿಯಾಗುವ ಇಚ್ಛೆಯೊಂದಿಗೆ ಆಗಮಿಸಿ, ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ಬಂಧಿತನನ್ನು ಓಹಿಯೋದ ಜೋಸೆಫ್ ವೆಕ್‌ವೈ ಎಂದು ಗುರುತಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದಿದ್ದು, ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಬಳಿಕ ಈತನ ವಿಚಾರಣೆ ನಡೆಸಿದಾಗ, ಅಧ್ಯಕ್ಷ ಬರಾಕ್ ಅವರು ನಗರದಲ್ಲಿ ಇದ್ದಿರುವ ವಿಷಯ ತಿಳಿಯಿತು. ಹಾಗಾಗಿ ತಾನು ಅಧ್ಯಕ್ಷರನ್ನು ನೋಡುವ ಇಚ್ಛೆ ಹೊಂದಿರುವುದಾಗಿ ವಿಮಾನ ನಿಲ್ದಾಣದ ಪ್ರಕಟಣೆ ವಿವರಿಸಿದೆ.
ಭಾನುವಾರ ಈ ವ್ಯಕ್ತಿ ಕಾರಿಗೆ ಪೊಲೀಸ್ ಕಾರಿನ ಸ್ಟೈಲ್‌ನ ಸೈರನ್ ಮತ್ತು ಕೆಂಪು ಲೈಟ್ ಅನ್ನು ಅಳವಡಿಸುತ್ತಿದ್ದಾಗ, ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿರುವೆ ಎಂದು ಪ್ರಶ್ನಿಸಿದಾಗ, ಅಧ್ಯಕ್ಷರು ನಗರದಲ್ಲಿದ್ದಾರೆ ಎಂಬ ವಿಷಯ ತಿಳಿಯಿತು, ಅವರನ್ನು ಭೇಟಿ ಮಾಡಬೇಕೆಂಬ ಇರಾದೆ ಹೊಂದಿದ್ದೇನೆ ಎಂದಿದ್ದ. ನಂತರ ಆತನನ್ನು ತಪಾಸಣೆ ನಡೆಸಿದಾಗ ಗನ್ ಜೊತೆಗಿರುವುದು ಪತ್ತೆಯಾಗಿತ್ತು. ನಂತರ ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ಆದರೆ ಬಂಧಿತ ವ್ಯಕ್ತಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲ ಎಂದು ವಿಮಾನ ನಿಲ್ದಾಣದ ಭದ್ರತಾ ವರಿಷ್ಠ ಜೆಫ್ ಆವ್‌ಗ್ರಾಮ್ ಸ್ಪಷ್ಟಪಡಿಸಿದ್ದಾರೆ.