ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತೈವಾನ್‌, ಫಿಲಿಫೈನ್ಸ್ ಭೂಕಂಪಕ್ಕೆ 'ಬೂಬ್‌ಕ್ವೇಕ್' ಕಾರಣವೇ? (Boobquake | earthquake | Ayatollah Kazem Sedighi | Jennifer McCreight)
Bookmark and Share Feedback Print
 
ಇರಾನ್ ಧರ್ಮಗುರು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ವಿಶ್ವದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಲಲನೆಯರು ಎದೆ ತೋರಿಸಿ 'ಬೂಬ್‌ಕ್ವೇಕ್' ಮೂಲಕ ಸವಾಲು ಹಾಕಿದ್ದೇ ತೈವಾನ್ ಮತ್ತು ಫಿಲಿಫೈನ್ಸ್‌ಗಳಲ್ಲಿ ಪ್ರಬಲ ಭೂಕಂಪ ಸಂಭವಿಸಲು ಕಾರಣವೇ? ಇಂತಹ ತಲೆಬುಡವಿಲ್ಲದ ಮಾತುಗಳು ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಹರಿದಾಡುತ್ತಿವೆ.

ಸ್ತ್ರೀಯರು ಅಶ್ಲೀಲವಾಗಿ ಬಟ್ಟೆ ಧರಿಸುವುದರಿಂದ ಭೂಕಂಪಗಳು ಸಂಭವಿಸುತ್ತಿವೆ. ದೈಹಿಕ ಪ್ರದರ್ಶನಕ್ಕೆ ಅನುವಾಗುವಂತಹ ಅನುಚಿತವಾಗಿ ಬಟ್ಟೆ ಧರಿಸಿಕೊಂಡ ಸ್ತ್ರೀಯರಿಂದಾಗಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿದ್ದು, ಇದೇ ಕಾರಣದಿಂದ ದೇಶದಲ್ಲಿ ಭೂಕಂಪಗಳು ಹೆಚ್ಚೆಚ್ಚು ಸಂಭವಿಸುತ್ತಿವೆ ಎಂದು ಇರಾನ್‌ನ ಧಾರ್ಮಿಕ ಮುಖಂಡ ಆಯತೊಲ್ಲಾಹ್ ಕಜೀಮ್ ಸೆಡಿಗೈ ಹೇಳಿಕೆಗೆ ವಿರುದ್ಧವಾಗಿ ಸೋಮವಾರ ವಿಶ್ವದಾದ್ಯಂತ ಎದೆಯನ್ನು ಅಲ್ಪಪ್ರಮಾಣದಲ್ಲಿ ತೋರಿಸುವ ಪ್ರತಿಭಟನೆಗಳು ನಡೆದಿದ್ದವು.

ಅಮೆರಿಕಾದ ಪುರ್ದೇ ಯುನಿವರ್ಸಿಟಿಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಜೆನ್ನಿಫರ್ ಮೆಕ್‌ರೈಟ್ ಎಂಬಾಕೆ ಸಾಮಾಜಿಕ ಸಂಪರ್ಕ ತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ಗಳಲ್ಲಿ 'ಬೂಬ್‌ಕ್ವೇಕ್' ಎಂಬ ಖಾತೆಯನ್ನು ತೆರೆದು, ವಿಶ್ವದಾದ್ಯಂತ ಬೆಂಬಲ ಪಡೆದುಕೊಂಡು 'ಬೂಬ್‌ಕ್ವೇಕ್' ಚಳವಳಿಗೆ ಚಾಲನೆ ನೀಡಿದ್ದಳು.

ಅಚ್ಚರಿಯೆಂದರೆ ಅದೇ ದಿನ ತೈವಾನ್ ಮತ್ತು ಫಿಲಿಫೈನ್ಸ್‌ಗಳಲ್ಲಿ ಭೂಕಂಪ ಸಂಭವಿಸಿರುವುದು.

'ನಾವು ಈ ರೀತಿ ನಮ್ಮ ಎದೆಗಳನ್ನು ಅಪಮಾನಕಾರಿಯಾಗಿ ತೋರಿಸುವ ಮೂಲಕ ಭೂಕಂಪ ನಡೆಯುವಂತೆ ಮಾಡಬೇಕು. ಭೂಕಂಪ ನಡೆಯದೇ ಇದ್ದರೆ ಇರಾನ್ ಧರ್ಮಗುರು ಯಾವ ಆಧಾರದಲ್ಲಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಬೇಕು' ಎಂದು ಮೆಕ್‌ರೈಟ್ ಇರಾನ್ ಧರ್ಮಗುರುವಿಗೆ ಸವಾಲು ಹಾಕಿದ್ದಳು.

ವರದಿಗಳ ಪ್ರಕಾರ ಸೋಮವಾರ ಫಿಲಿಫೈನ್ಸ್ ಮತ್ತು ತೈವಾನ್‌ಗಳಲ್ಲಿ ರಿಕ್ಟರ್ ಮಾಪಕ 6.9 ಪ್ರಬಲತೆಯ ಭೂಕಂಪಗಳು ಸಂಭವಿಸಿವೆ. ಘಟನೆಯಲ್ಲಿ ಸಾವನ್ನಪ್ಪಿರುವ ವರದಿಗಳು ಬಂದಿಲ್ಲ. ಆದರೆ ಭಾರೀ ಪ್ರಮಾಣದ ಭೂಕುಸಿತಗಳು ಸಂಭವಿಸಿವೆ.

ಆದರೆ ಯುವತಿಯರು 'ಬೂಬ್‌ಕ್ವೇಕ್' ನಡೆಸಿದ್ದರಿಂದಾಗಿಯೇ ಭೂಕಂಪ ಸಂಭವಿಸಿದೆ ಎಂಬ ವಾದವನ್ನು ಮೆಕ್‌ರೈಟ್ ಒಪ್ಪಿಕೊಳ್ಳಲು ತಯಾರಿಲ್ಲ. ನಾನು ನೀಡಿದ ಸಮಯದಲ್ಲಿ ಭೂಕಂಪ ಸಂಭವಿಸಿಲ್ಲವಾಗಿದ್ದರಿಂದ ತೈವಾನ್ ಘಟನೆ ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಆಕೆ ಪತ್ರಿಕೆಯೊಂದರ ಜತೆ ಹೇಳಿಕೊಂಡಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ